ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಹರಗಣ ವಿಚಾರವಾಗಿ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದವು. ಮೂರನೇ ದಿನವಾದ ಇಂದು ಕಾಂಗ್ರೆಸ್-ಬಿಜೆಪಿ ನಡುವೆ ಕೋಲಾಹಲ ನಡೆದಿದೆ.
ಪರಿಶಿಷ್ಟರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬಳಸಿದ್ದೀರಿ, ನೀವು ಪರಿಶಿಷ್ಟರ ವಿರೋಧಿ ಸರ್ಕಾರ ಎಂದು ಆರ್.ಅಶೋಕ್ ಕಿಡಿ ಕಾರಿದ್ದಾರೆ. ಈ ವೇಳೆ ಆರ್.ಅಶೋಕ್, ಸುನಿಲ್ಕುಮಾರ್ಗೆ ಅಶ್ವತ್ಥ್ ನಾರಾಯಣ್ ಧನಿಗೂಡಿಸಿದ್ದಾರೆ.
ಅಶ್ವತ್ಥ್ ನಾರಾಯಣ್ ಮಾತಿಗೆ ಸಿಎಂ ಸಿದ್ದರಾಮಯ್ಯ ಕೆರಳಿ ಕೆಂಡವಾಗಿ, ನೀವು ಪರಿಶಿಷ್ಟರ ಹಣ ನುಂಗಿದವರು, ನಿಮ್ಮ ಕಾಲದಲ್ಲಿ ಏನಾಯ್ತು. ಬಡವರ ಹಣ ನುಂಗಿದ್ದಕ್ಕೇ ನಿಮ್ಮನ್ನು ಜನರು ಅಲ್ಲಿ ಕೂರಿಸಿದ್ದಾರೆ, ನಿಮ್ಮ ಕಾಲದಲ್ಲಿ ಏನೇನಾಗಿದೆ ಅನ್ನೋದೆಲ್ಲಾ ನಮಗೆ ಗೊತ್ತಿದೆ. ನೀವೆಲ್ಲಾ ಎದ್ದು ನಿಂತರೂ ಉತ್ತರ ಕೊಡೋ ಶಕ್ತಿ ನನಗಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಮೇಲೆ ಸಿದ್ದರಾಮಯ್ಯ ಗುಡುಗಿದ್ದಾರೆ. ನಂತರ ನಿಮಗೆ ನಾಚಿಕೆ ಆಗ್ಬೇಕು, ನಿಮಗೆ ನಾಚಿಕೆ ಆಗ್ಬೇಕು ಎಂದು ಕೈ-ಕಮಲ ಗುದ್ದಾಡಿಕೊಂಡಿದೆ.
ಇದನ್ನೂ ಓದಿ : ಅನ್ನದಾತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್ ಒಂದು ವಾರ ಬಂದ್ – ಸದನದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ ..!