Download Our App

Follow us

Home » ರಾಷ್ಟ್ರೀಯ » ವಿಶ್ವವಿಖ್ಯಾತ ಕಾಜಿರಂಗ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಬೆಳ್ಳಂಬೆಳಗ್ಗೆ ಮೆಗಾ ಸಫಾರಿ..!

ವಿಶ್ವವಿಖ್ಯಾತ ಕಾಜಿರಂಗ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಬೆಳ್ಳಂಬೆಳಗ್ಗೆ ಮೆಗಾ ಸಫಾರಿ..!

ಅಸ್ಸಾಂ : ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ವಿಶ್ವವಿಖ್ಯಾತ ಕಾಜಿರಂಗ ಅಭಯಾರಣ್ಯದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಫಾರಿ ಮಾಡಿದ್ದಾರೆ. ಮೋದಿ ಕಾಜಿರಂಗ ಅಭಯಾರಣ್ಯದಲ್ಲಿ ಶುಕ್ರವಾರ ರಾತ್ರಿ ಕಳೆದಿದ್ದು, ಶನಿವಾರ ಬೆಳಗ್ಗೆ ಅವರು ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಕೈಗೊಂಡರು. ಅದರಲ್ಲೂ, ಪ್ರಧಾನಿಯವರು ಆನೆ ಮೇಲೆ ಕುಳಿತು ಸಫಾರಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮಿಹಿಮುಖ್‌ ಪ್ರದೇಶದಲ್ಲಿ ಮೋದಿ ಅವರು ಸಫಾರಿ ಕೈಗೊಂಡಿದ್ದು, ಇಡೀ ರಾತ್ರಿಯನ್ನು ಪ್ರಧಾನಿಯು ರಾಷ್ಟ್ರೀಯ ಉದ್ಯಾನದಲ್ಲಿಯೇ ಕೈಗೊಳ್ಳುವ ಮೂಲಕ ಕಾಜಿರಂಗ ಅರಣ್ಯದಲ್ಲಿ ಒಂದು ರಾತ್ರಿ ಕಳೆದ ದೇಶದ ಮೊದಲ ಪ್ರಧಾನಿ ಎನಿಸಿದ್ದಾರೆ. ಇದುವರೆಗೆ ದೇಶದ ಯಾವ ಪ್ರಧಾನಿಯೂ ಕಾಜಿರಂಗ ಅರಣ್ಯದಲ್ಲಿ ಒಂದು ರಾತ್ರಿ ಕಳೆದಿರಲಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

ಕಾಜಿರಂಗ ಸಫಾರಿ ಬಳಿಕ ಮೋದಿ ಅವರು ಜೊರ್ಹಾತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ಸುಮಾರು 18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ : ಕರ್ನಾಟಕದ 7 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here