ಬೀದರ್ : ಜೆಡಿಎಸ್ನ 18 ಶಾಸಕರನ್ನು ಕಾಂಗ್ರೆಸ್‌ಗೆ ಕರೆಸುತ್ತೀನಿ ಎಂದಿದ್ದ ಚನ್ನಪಟ್ಟಣದ ನೂತನ ಶಾಸಕ ಸಿಪಿ ಯೋಗೇಶ್ವರ್ ಹೇಳಿಕೆ ವಿರುದ್ಧ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೀದರ್ನಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಕಾಂಗ್ರೆಸ್‌ಗೆ ಹೋಗಲು ನಾವು ಹಸಿದು ಕೂತಿಲ್ಲ, ಯೋಗೇಶ್ವರ್ ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು
ಶಾಸಕ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ದೇವೇಗೌಡರ ಬಗ್ಗೆ ಮಾತಾಡಲು ನಿಮಗೆ ಯೋಗ್ಯತೆ ಇಲ್ಲ, ತೋಳ್ಬಲ, ಹಣ ಬಲ, ಅಧಿಕಾರದ ಬಲದಿಂದ ಗೆದ್ದಿದ್ದೀರಿ. ಯೋಗೇಶ್ವರ್ಗೆ ಗೌಡರ ಬಗ್ಗೆ ಮಾತ್ನಾಡೋ ನೈತಿಕತೆ ಇಲ್ಲ. ಚನ್ನಪಟ್ಟಣ ಜನ ಎರಡು ಬಾರಿ ಕುಮಾರಣ್ಣನಿಗೆ ಗೆಲ್ಲಿಸಿದ್ದಾರೆ. ಆದರೆ ಯೋಗೇಶ್ವರ್ ಎರಡು ಬಾರಿ ಚನ್ನಪಟ್ಟಣದಲ್ಲಿ ಸೋತಿದ್ರು, ಈಗ ಗೆದ್ದಿದ್ದಾರೆ. ಜನರು ಗೆಲ್ಲಿಸಿದ್ದಾರೆ, ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸಿ ಎಂದು ಕಿಡಿಕಾರಿದ್ದಾರೆ.
ಯೋಗೇಶ್ವರ್ ವಿರುದ್ಧ ಕೆಲ ಜೆಡಿಎಸ್ ಶಾಸಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಇವರೆಲ್ಲಾ ಕೊಂಡುಕೊಂಡಿದ್ದಾರಾ..? ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳಲಿ ಎಂದು
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಕೆಂಡ ಕಾರಿದ್ದಾರೆ.
ಇದನ್ನೂ ಓದಿ : ಮೈಸೂರು : ಡಿವೈಡರ್ಗೆ ಡಿಕ್ಕಿಯಾಗಿ ಬಸ್ ಪಲ್ಟಿ – 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ..!