ಬೆಂಗಳೂರು : ವಕ್ಫ್ ಆಸ್ತಿ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಷಯ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ರೈತರಿಗೆ ನೋಟಿಸ್ ನೀಡುವ ಮೂಲಕ ವಕ್ಫ್ ಮಂಡಳಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದೀಗ ವಕ್ಫ್ ಕೋಲಾಹಲ ಹೊತ್ತಲ್ಲೇ ಅಚ್ಚರಿ ಬೆಳವಣಿಯೊಂದು ನಡೆದಿದ್ದು, ವಕ್ಫ್ ಸಚಿವ ಜಮೀರ್ ಶಾಸಕ ಯತ್ನಾಳ್ ಭೇಟಿಯಾಗಿದ್ದಾರೆ.
ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ. ಅಷ್ಟೇ ಅಲ್ಲದೆ, ವಿಜಯೇಂದ್ರಗೆ ಸೆಡ್ಡು ಹೊಡೆದು ಖುದ್ದು ವಕ್ಫ್ ನೋಟಿಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೋರಾಟ ನಡೆಸುತ್ತಿದ್ದಾರೆ.
ಇನ್ನು ಬಿಜೆಪಿಯ ಶಾಸಕ ಯತ್ನಾಳ್ ಹಾಗೂ ಜಮೀರ್ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡಿರುವುದು ಸಹ ಇದೆ. ಸದನದ ಒಳಗೆ ಹಾಗೂ ಸದನದ ಹೊರಗೆ ಜಮೀರ್ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಇಂಥಾ ಹೊತ್ತಲ್ಲೇ ಸುವರ್ಣಸೌಧದಲ್ಲಿ ಜಮೀರ್ ಭೇಟಿಯಾಗಿ ಯತ್ನಾಳ್ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ.. ಬರ್ತಡೇಗೆ ‘ಪರಾಕ್’ ಸಿನಿಮಾ ಘೋಷಣೆ..!