ಬೆಂಗಳೂರು : ಬೆಂಗಳೂರು ಕೈ ಶಾಸಕರಿಗೆ ಸಿಎಂ ಬುಲಾವ್ ನೀಡಿದ್ದು, ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರನ್ನು ಕಾಂಗ್ರೆಸ್ ಶಾಸಕರ ನಿಯೋಗ ಭೇಟಿಯಾಗಲಿದೆ. ಲೋಕಸಭಾ ಚುನಾವಣೆ ಬಳಿಕ ಸಿಎಂ-ಡಿಸಿಎಂರನ್ನು ಮೊದಲ ಬಾರಿಗೆ ಶಾಸಕರು ಭೇಟಿಯಾಗ್ತಿದ್ದಾರೆ.
ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ಶಾಸಕರ ನಿಯೋಗ ಭೇಟಿ ಮಾಡಲಿದ್ದು, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರದ ಸೋಲಿನ ಬಗ್ಗೆ ಶಾಸಕರ ಜೊತೆ ಸಿಎಂ ಪರಾಮರ್ಶೆ ನಡೆಸಲಿದ್ದಾರೆ. ಹಿನ್ನಡೆ ಬಗ್ಗೆ ಪ್ರತಿಯೊಬ್ಬ ಶಾಸಕರು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಲಿದ್ದಾರೆ.
ಅಲ್ಲದೆ, ಇದೇ ಸಭೆಯಲ್ಲಿ ಬಿಬಿಎಂಪಿ ಎಲೆಕ್ಷನ್ ಭವಿಷ್ಯ ನಿರ್ಧಾರವಾಗಲಿದೆ. ಬೇಗ ಎಲೆಕ್ಷನ್ ನಡೆಸಬೇಕೋ? ಸ್ವಲ್ಪ ದಿನ ಕಾಯಬೇಕೋ? ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರ ಅಭಿಪ್ರಾಯ ಕೇಳಲಿದ್ದಾರೆ. ಇನ್ನು, ಹೆಚ್ಚಿನ ಅನುದಾನ ಬಗ್ಗೆ ಸಿಎಂ ಹಾಗೂ ಡಿಸಿಎಂ ಬಳಿ ಶಾಸಕರು ಬೇಡಿಕೆ ಇಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಕಾಶ್ಮೀರ : ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರಿಂದ ಗುಂಡಿನ ದಾಳಿ – 10 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ..!