ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎಸ್. ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿ ಡಾ. ಕೆ ಸುಧಾಕರ್ ಅವರಿಗೆ ಸಿಕ್ಕಿರುವುದು ವಿಶ್ವನಾಥ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಚಿಕ್ಕಬಳ್ಳಾಪುರ ಬಂಡಾಯಕ್ಕೆ ಅಮಿತ್ ಶಾ ಮದ್ದು ಅರೆದಿದ್ದು, ಕೊನೆಗೂ ವಿಶ್ವನಾಥ್ ಹಾಗೂ ಸುಧಾಕರ್ ಮುನಿಸು ಶಮನಗೊಂಡಿದೆ.
ಬಿಜೆಪಿಯು ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಿದ್ದು, ಈ ಉದ್ದೇಶದಿಂದ ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದರು. ಇನ್ನು ಮುಖ್ಯವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲೋಕಸಭೆ ವಿಚಾರವಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದ ಕಾರಣ ಬಂಡಾಯವೆದ್ದ ನಾಯಕರನ್ನು ಕರೆದು ಬಿಜೆಪಿ ಚುನಾವಣಾ ಚಾಣಕ್ಯ ಬಂಡಾಯ ಶಮನ ಮಾಡುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.
ಇದೀಗ, ರಾಧಾ ಮೋಹನ್ ದಾಸ್ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಸುಧಾಕರ್ ಪರ ಕೆಲಸ ಮಾಡಲು ಶಾಸಕ ವಿಶ್ವನಾಥ್ ಒಪ್ಪಿಕೊಂಡಿದ್ದಾರೆ. ಚುನಾವಣಾ ಉಸ್ತುವಾರಿ ಸಮ್ಮುಖದಲ್ಲಿ ರಾಜಿ ಸಂಧಾನವಾಗಿದ್ದು, ವಿಶ್ವನಾಥ್ ಮತ್ತು ಸುಧಾಕರ್ ಒಟ್ಟಿಗೆ ತಿಂಡಿ ತಿಂದು, ಕಾಫಿ ಕುಡಿದ್ದಾರೆ. ಇನ್ನು ಕಾಫಿ ಕುಡಿದು, ತಿಂಡಿ ತಿಂದು ಮುನಿಸು ಮರೆತ ಉಭಯ ನಾಯಕರು ನಾಳೆ ಸುಧಾಕರ್ ನಾಮಪತ್ರ ಸಲ್ಲಿಕೆಗೆ ಸಾಥ್ ಕೊಡಲಿದ್ದಾರೆ.
ಇದನ್ನೂ ಓದಿ : ಮೈತ್ರಿ ಧರ್ಮವನ್ನು ಪಾಲನೆ ಮಾಡ್ತಾರಾ? ಇಲ್ಲ ಪಕ್ಷೇತರವಾಗಿ ಸ್ಪರ್ಧೆನಾ? ಇಂದು ಸುಮಲತಾ ಅಂಬರೀಶ್ ನಿರ್ಧಾರ ಪ್ರಕಟ..!