Download Our App

Follow us

Home » ಅಪರಾಧ » ‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!

‘ಗೋಲ್ಡ್ ಬ್ಯೂಟಿ’ಯಿಂದ ಸಂಕಷ್ಟಕ್ಕೆ ಸಿಲುಕಿದ್ರಾ MLA ವಿನಯ್ ಕುಲಕರ್ಣಿ? ಯಾವುದೇ ಕ್ಷಣ ನೋಟಿಸ್ ಸಾಧ್ಯತೆ!

ಬೆಂಗಳೂರು : ಚಂದ್ರಾಲೇಔಟ್‌ ಠಾಣೆಯಲ್ಲಿ ದಾಖಲಾಗಿರುವ ಐಶ್ವರ್ಯಾ ಗೌಡ ದಂಪತಿ ವಿರುದ್ಧದ ‘ಬಂಗಾರ’ ವಂಚನೆ ಪ್ರಕರಣದಲ್ಲಿ MLA ವಿನಯ್ ಕುಲಕರ್ಣಿಗೆ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಐಶ್ವರ್ಯಾ ಗೌಡ ಅವರ ಪತಿ ಹರೀಶ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್‌ ಕಾರನ್ನು MLA ವಿನಯ್ ಕುಲಕರ್ಣಿ ಬಳಕೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಐಶ್ವರ್ಯಾ ಗೌಡ ದಂಪತಿಯೊಂದಿಗೆ ಸಂಬಂಧ, ವ್ಯವಹಾರ ಕುರಿತು ಪೊಲೀಸರು ವಿನಯ್ ಕುಲಕರ್ಣಿ ಅವರಿಗೆ ನೋಟಿಸ್​ ನೀಡಿ ಶೀಘ್ರವೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಹೌದು.. ಈ ವಂಚನೆ ಪ್ರಕರಣದ ಆರೋಪಿಗಳಾಗಿರುವ ಐಶ್ವರ್ಯಾ ಗೌಡ ದಂಪತಿ ಹಾಗೂ ದೂರುದಾರೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್‌ಗೆ ವಿನಯ್ ಕುಲಕರ್ಣಿ ಚಿರಪರಿತರು. ವಂಚನೆ ಪ್ರಕರಣ ದಾಖಲಾಗುವ ಮುನ್ನ ಐಶ್ವರ್ಯ ಗೌಡ ಮತ್ತು ದೂರುದಾರೆ ವನಿತಾ ಐತಾಳ್ ಅವರನ್ನು ಕಾಂಗ್ರೆಸ್ MLA ವಿನಯ್ ಕುಲಕರ್ಣಿ ಅವರು ನಗರದ ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್​​ವೊಂದರಲ್ಲಿ ಭೇಟಿ ಮಾಡಿ ಸಂಧಾನ ನಡೆಸಲು ಯತ್ನಿಸಿದ್ದರು ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಐಶ್ವರ್ಯಾ ಗೌಡ ಮತ್ತು ವನಿತಾ ಐತಾಳ್ ಸಹ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿನಯ್ ಕುಲಕರ್ಣಿ ಅವರು ತಮ್ಮಿಬ್ಬರಿಗೂ ಪರಿಚವಿರುವ ಬಗ್ಗೆ ಹೇಳಿಕೊಂಡಿದ್ದರು. ಯಶವಂತಪುರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಇಬ್ಬರನ್ನೂ ಕೂರಿಸಿ ಬುದ್ದಿವಾದ ಹೇಳಿದ್ದಾಗಿಯೂ ಐಶ್ವರ್ಯಾ ಗೌಡ ಹಾಗೂ ವನಿತಾ ಐತಾಳ್ ತಿಳಿಸಿದ್ದರು. ವಾರಾಹಿ ಜ್ಯುವೆಲ್ಲರಿಯ ವನಿತಾ MLA ಕುಲಕರ್ಣಿಗೆ ಬೆಳ್ಳಿ ಕಿರೀಟನ್ನು ಈ ಹಿಂದೆ ಕೊಟ್ಟಿದ್ದರು.  ಹಾಗಾಗಿ ಯಾವುದೇ ಕ್ಷಣದಲ್ಲಿ MLA ಕುಲಕರ್ಣಿಗೆ ಪೊಲೀಸರು ನೋಟಿಸ್ ನೀಡೋ ಸಾಧ್ಯತೆಯಿದ್ದು,ಈ ಎಲ್ಲಾ ವಿಚಾರಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

Leave a Comment

DG Ad

RELATED LATEST NEWS

Top Headlines

“ರಾವಣಾಪುರ” ಟ್ರೇಲರ್ ರಿಲೀಸ್ – ಜ.17ಕ್ಕೆ ಸಿನಿಮಾ ರಿಲೀಸ್..!

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಗಳು ನಡೆಯುತ್ತಲೇ ಇವೆ. ಆ ಪ್ರಯತ್ನಗಳು ಸೋತ್ರು ಗೆದ್ರು ಹೊಸಬರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಅದರಂತೆ ಈಗ ಹೊಸ ತಂಡವೊಂದು ಸೇರಿಕೊಂಡು

Live Cricket

Add Your Heading Text Here