ಹಾಸ್ಯ ನಾಟ ಮಿತ್ರ ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ, ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈಗ ನಟ ಮಿತ್ರ ಅವರ ಖದರ್ ಬದಲಾಗಿದೆ. ಲುಕ್ ಬೇರೆಯದ್ದೇ ರೀತಿ ಇದೆ.
ಹೌದು, ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದಲ್ಲಿ ನಟ ಮಿತ್ರ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡಿದ್ದಾರೆ. ಒಂದು ಸಿನಿಮಾಗಾಗಿ ಮಾಡಿಕೊಂಡ ಲುಕ್ ಈಗ ಮಿತ್ರ ಅವರ ಕೆರಿಯರ್ನಲ್ಲಿ ಟರ್ನಿಂಗ್ ಪಾಯಿಂಟ್ ಕೊಡ್ತಿದೆ.
ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್ವುಡ್ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತಿ ಪಾತ್ರಗಳು ಹುಡುಕಿ ಬರ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲಿಷ್ ವಿಲನ್ ಲುಕ್ನಲ್ಲಿ ಮಿತ್ರ ಪೋಟೋಶೂಟ್ ಮಾಡಿಸಿದ್ದಾರೆ.
ಸದ್ಯ ಮಿತ್ರ ಅವರು ಮಾಡಿಸಿರೋ ಫೋಟೋಶೂಟ್ಗಳನ್ನ ನೋಡ್ತಿದ್ರೆ ವಾವ್ಹ್ ಮಿತ್ರ ಅವ್ರು ಹೀಗೂ ಕಾಣ್ತಾರಾ ಅಂತ ಅನ್ನಿಸೋದು ಗ್ಯಾರೆಂಟಿ. ವಿಲನ್ ಲುಕ್ನಲ್ಲಿ ಸಾಕಷ್ಟು ವಿಭಿನ್ನ ಶೇಡ್ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಮಿತ್ರ ಅವ್ರ ಲುಕ್ ಅನ್ನ ಸ್ಟೈಲಿಷ್ ಮಾಡಿರೋದು ಕಾಲಿವುಡ್ ನ ಸ್ಟೈಲಿಷ್ ಕಣ್ಮಣಿ.
ಮಿತ್ರ ಅವರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ. ಕರಾವಳಿ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ.
ಕಲಾವಿದ ಆದವ್ರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಅನ್ನೋದನ್ನ ಮಿತ್ರ ಅವ್ರ ಫಾಲೋ ಮಾಡಿದಂತಿದೆ. ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ.
ಇದನ್ನೂ ಓದಿ : ಮಲಯಾಳಂ ‘ಮನೋರಥಂಗಳ್’ ಚಿತ್ರದ ಟ್ರೇಲರ್ ರಿಲೀಸ್ – ಒಂಭತ್ತು ಕಥೆಗಳಿಗೆ 8 ಜನ ನಿರ್ದೇಶಕರು..!