Download Our App

Follow us

Home » ಅಪರಾಧ » ಪ್ರಭಾವಿ ಮಂತ್ರಿಯ ಸೆಕ್ಸ್​​ ವಿಡಿಯೋ ಸ್ಪೋಟ.. ಆ ಪವರ್​ಫುಲ್​ ಮಿನಿಸ್ಟರ್​ ಯಾರು ಗೊತ್ತಾ?

ಪ್ರಭಾವಿ ಮಂತ್ರಿಯ ಸೆಕ್ಸ್​​ ವಿಡಿಯೋ ಸ್ಪೋಟ.. ಆ ಪವರ್​ಫುಲ್​ ಮಿನಿಸ್ಟರ್​ ಯಾರು ಗೊತ್ತಾ?

ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್​​ಡ್ರೈವ್ ಪ್ರಕರಣ​​ ದಿನ ಕಳೆದಂತೆ ಒಂದೊಂದು ರೂಪ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಜ್ವಲ್ ಪೆನ್​​ಡ್ರೈವ್​ ಪ್ರಕರಣದ ಹೊತ್ತಲ್ಲೇ ಪ್ರಭಾವಿ ಮಂತ್ರಿಯೊಬ್ಬರ ಸೆಕ್ಸ್ ವಿಡಿಯೋ ಮಹಾ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಪ್ರಜ್ವಲ್ ಪ್ರಕರಣ ರಾಜ್ಯದ್ಯಾಂತ ಭಾರೀ ಸದ್ದು ಮಾಡುತ್ತಿರುವಾಗಲೇ, ಇನ್ನೊಬ್ಬ ಮಂತ್ರಿಯ ಸೆಕ್ಸ್ ಸ್ಕ್ಯಾಂಡಲ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಆ ಮಂತ್ರಿಯ ರಾಸಲೀಲೆ ವಿಡಿಯೋ ಬೆಳಕಿಗೆ ಬಂದರೆ ರಾಜ್ಯ ಸರ್ಕಾರವನ್ನೇ ಬೆಚ್ಚಿ ಬೀಳಿಸಲಿದೆ. ಮಿನಿಸ್ಟರ್ ಸೆಕ್ಸ್ ವಿಡಿಯೋ ಯಾವುದೇ ಕ್ಷಣ ಸ್ಫೋಟವಾಗೋ ಸಾಧ್ಯತೆಯಿದ್ದು, ಈಗಾಗಲೇ ಇಂಟಲಿಜೆನ್ಸ್ ವಿಂಗ್ ಸೆಕ್ಸ್ ವಿಡಿಯೋದ ಮೂಲವನ್ನು ಹುಡುಕಾಡಲು ಮುಂದಾಗಿದೆ.

ಪ್ರಜ್ವಲ್​ ರೇವಣ್ಣ ಪೆನ್​ ಡ್ರೈವ್​ ಕೇಸ್​ ನಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಸರೆರಚಾಟ ಪ್ರಾರಂಭಿಸಿದೆ. ಪ್ರಭಾವಿ ಮಂತ್ರಿಯ ವಿಡಿಯೋ ಹೊರ ಬಂದರೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್​ ಮತ್ತು ಬಿಜೆಪಿ ಜಂಟಿಯಾಗಿ ಬೀದಿಗಿಳಿದು ಕೋಲಾಹಲ ಎಬ್ಬಿಸಲಿದೆ. ಇದು ರಾಜ್ಯ ಸರ್ಕಾರಕ್ಕೆ ಕಂಟಕವಾಗಬಹುದಾದ ಸಾಧ್ಯತೆ ಇದೆ.

ಪ್ರಜ್ವಲ್ ರೇವಣ್ಣಗಿಂತಲೂ ಮಂತ್ರಿ ಸೆಕ್ಸ್ ವಿಡಿಯೋ ಭಾರೀ ಹಲ್​​ಚಲ್​ ಎಬ್ಬಿಸುತ್ತಿದ್ದು, ಆ ಮಿನಿಸ್ಟರ್ ಸೆಕ್ಸ್ ವಿಡಿಯೋ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.  ಮಿನಿಸ್ಟರ್ ಸೆಕ್ಸ್ ವಿಡಿಯೋ ಯಾರ ಬುಡಕ್ಕೆ ಕುತ್ತು ತರುತ್ತೆ..? ಸರ್ಕಾರಕ್ಕೆ ಹೇಗೆ ಕಂಟಕವಾಗುತ್ತೆ..? ರಾಜ್ಯ ರಾಜಕೀಯದಲ್ಲಿ ಅದೇಗೆ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡುತ್ತೆ ಅನ್ನುವ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ – 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್ಪೋಲ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here