ಗುಲ್ಬರ್ಗ : ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಹೆಡ್ ಮಾಸ್ಟರರೇ ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಹೆಡ್ ಮಾಸ್ಟರ್ ಖಾಜಪ್ಪಾ ಮೇಲೆ ಹಾಲಿನ ಪೌಡರ್ ಕದಿಯುತ್ತಿರುವ ಆರೋಪ ಕೇಳಿ ಬಂದಿದೆ.
ಹೆಡ್ ಮಾಸ್ಟರ್ ಖಾಜಪ್ಪಾ ಚೀಲದಲ್ಲಿ 28 ಕೆ.ಜಿಯಷ್ಟು ಹಾಲಿನ ಪೌಡರ್ ತುಂಬಿಕೊಂಡು ಬೈಕ್ ಮೇಲೆ ಬೇರೆಡೆ ಒಯ್ಯುತ್ತಿದ್ದಾರು. ಈ ವೇಳೆ ಹೆಡ್ ಮಾಸ್ಟರ್ ಗ್ರಾಮದ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇನ್ನು ಹೆಡ್ ಮಾಸ್ಟರ್ನನ್ನ ಹಿಡಿದು ಗ್ರಾಮದ ಯುವಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್..!
Post Views: 99