Download Our App

Follow us

Home » ಸಿನಿಮಾ » ಚಿತ್ರದ ಮೂಲಕ ಜನರಮನ ಗೆದ್ದ ‘ಮಾವು ಬೇವು’ ಈಗ ಪುಸ್ತಕರೂಪದಲ್ಲಿ ಲಭ್ಯ..!

ಚಿತ್ರದ ಮೂಲಕ ಜನರಮನ ಗೆದ್ದ ‘ಮಾವು ಬೇವು’ ಈಗ ಪುಸ್ತಕರೂಪದಲ್ಲಿ ಲಭ್ಯ..!

ಸುಚೇಂದ್ರ ಪ್ರಸಾದ್ ನಿರ್ದೇಶಿಸಿರುವ ಹಾಗೂ ಸಂದೀಪ್, ಚೈತ್ರ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸಮೂರ್ತಿ ಮುಂತಾದವರು ಅಭಿನಯಿಸಿರುವ ಸಂಗೀತ ಸುಭಗದ ಕನ್ನಡ ಕಥಾಚಿತ್ರ “ಮಾವು ಬೇವು” ಬಿಡುಗಡೆಯಾಗಿ ಎಲ್ಲರ ಮನಸ್ಸಿಗೆ ಹತ್ತಿರವಾಗಿತ್ತು. ಹಲವು ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡು ಪ್ರಶಸ್ತಿಯ ಜೊತೆಗೆ ಮೆಚ್ಚುಗೆಯನ್ನು ಪಡೆದಿತ್ತು.

ಈಗ ಈ ಚಿತ್ರ ಆಕರ ಗ್ರಂಥವಾಗಿ ಹೊರಹೊಮ್ಮಿದೆ. ಕಾವ್ಯ ಸ್ಪಂದನ ಪಬ್ಲಿಕೇಶನ್​​ನ ಭದ್ರಾವತಿ ರಾಮಾಚಾರಿ ಅವರು ಇದನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ “ಮಾವು ಬೇವು” ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಖ್ಯಾತ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ, ನಟಿ ತಾರಾ ಅನುರಾಧಾ, ಡಾ|ವಿಜಯ ಲಕ್ಷ್ಮೀ ದೇಶಮಾನೆ, ಲಹರಿ ವೇಲು ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಆಕರ ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಚಿತ್ರದಲ್ಲಿ ನಟಿಸಿರುವ ಸಂದೀಪ್, ಚೈತ್ರ, ಡ್ಯಾನಿ ಕುಟ್ಟಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆಕರ ಗ್ರಂಥ ಲೋಕಾರ್ಪಣೆ ಬಳಿಕ ಮಾತನಾಡಿದ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು, ಸಂಗೀತ ಸುಭಗದ ಕನ್ನಡ ಕಥಾಚಿತ್ರ “ಮಾವು ಬೇವು” ನನ್ನ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಶ್ರೀ ಸಾಯಿಗಗನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್ ರಾಜಶೇಖರ್ ಅವರು ನಿರ್ಮಿಸಿರುವ “ಮಾವು ಬೇವು” ಚಿತ್ರವನ್ನು ಈಗ ಆಕರ ಗ್ರಂಥವಾಗಿ ಪುಸ್ತಕರೂಪದಲ್ಲಿ ಕಾವ್ಯ ಸ್ಪಂದನ‌ ಪ್ರಕಾಶನದ ಭದ್ರಾವತಿ ರಾಮಾಚಾರಿ ಅವರು ಹೊರ ತಂದಿದ್ದಾರೆ.

ಈ ಪುಸ್ತಕಕ್ಕೆ ಖ್ಯಾತ ಸಹಿತಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್ ಲಕ್ಷ್ಮಣ್ ರಾವ್, ನಿರ್ದೇಶಕ ಲಿಂಗದೇವರು ಮುಂತಾದವರು ಬೆನ್ನುಡಿ ಬರೆದಿದ್ದಾರೆ. ಚಿತ್ರ ಸಾಗಿ ಬಂದ ಬಗ್ಗೆ ಈ ಪುಸ್ತಕದಲ್ಲಿ ವಿವರಣೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ : ಚಿಕನ್​ ಸಾಂಬಾರ್​​ನಲ್ಲಿ ಉಪ್ಪು ಕಡಿಮೆ ಇದೆ ಎಂದ ಗಂಡ – ರಾಡ್​ನಿಂದ ಹೊಡೆದು ಕೊ*ಲೆ ಮಾಡಿದ ಹೆಂಡತಿ..!

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here