ಮಂಗಳೂರು : ದ.ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕಣಿಯೂರಿನಲ್ಲಿ ಮಹೇಶ್ ಶೆಟ್ಟಿ ಬಣದವರಿಂದ BJP ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಕಣಿಯೂರು ಗ್ರಾ.ಪಂ.ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್ ಗೌಡ ಎಂಬವರ ಮೇಲೆ ರಾಜಕೀಯ ವೈಮನಸ್ಸಿನ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿ ಬಣದಲ್ಲಿ ಗುರುತಿಸಿಕೊಂಡವರು ಹಲ್ಲೆ ನಡೆಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ರಾಧಾಕೃಷ್ಣ ಗೌಡ ಎಂಬವರು ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪ್ರವೀಣ್ ಗೌಡ ಅವರಿಗೆ ಅವ್ಯಾಚ್ಯವಾಗಿ ನಿಂದಿಸಿ ವಾಯ್ಸ್ ಮೆಸೆಜ್ ಕಳಿಸಿದ್ರು. ಈ ಬಗ್ಗೆ ನಿನ್ನೆ ರಾಧಾಕೃಷ್ಣ ಅವರನ್ನ ಪೊನ್ ಮಾಡಿ ವಿಚಾರಿಸಿದಾಗ ರಾಧಾಕೃಷ್ಣ ಗೌಡ ಹಾಗೂ, ಪ್ರಜ್ವಲ್, ಕಿರಣ್ ಶಿಶಿಲ ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಪ್ರವೀಣ್ ಗೌಡನ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗೆ ಭೇಟಿ ನೀಡಿ ಪ್ರವೀಣ್ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ : ನಮ್ಮ ಸರ್ಕಾರ ಕೆಡವಲು ಯಾರಿಂದಲೂ ಆಗಲ್ಲ – ಸಿಎಂ ಸಿದ್ದರಾಮಯ್ಯ..!
Post Views: 56