ಮಂಗಳೂರು : ಬೀದರ್ನಲ್ಲಿ ATM ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಮಾಡಿದ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಇಂದು ಹಾಡಹಗಲೇ ಬ್ಯಾಂಕ್ ದರೋಡೆ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಮಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಭಾರೀ ದರೋಡೆ ನಡೆದಿದೆ. ಹಾಡಹಗಲೇ ಫಿಯೇಟ್ ಕಾರಿನಲ್ಲಿ ಬಂದ ಐದು ಮಂದಿ ದರೋಡೆಕೋರರ ತಂಡ ಬಂದೂಕು ತೋರಿಸಿ ದರೋಡೆ ನಡೆಸಿದೆ. ಆ ಬಳಿಕ ಚಿನ್ನ ಒಡವೆ, ನಗದುಗಳನ್ನ ದೋಚಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ತನಿಖೆ ಶುರುಮಾಡಿದ್ದಾರೆ.
ದರೋಡೆಕೋರರು 12 ಕೋಟಿಗೂ ಅಧಿಕ ಹಣ ದರೋಡೆ ಮಾಡಿದ್ದು, ಖತರ್ನಾಕ್ ಕಳ್ಳರ ಕೈಚಳಕ CCTVಯಲ್ಲಿ ಸೆರೆಯಾಗಿದೆ. ದರೋಡೆಕೋರರು ಪಕ್ಕಾ ಪ್ಲ್ಯಾನ್ ಮಾಡಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಮಂಗಳೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಹೆಚ್ಚಿನ ಭದ್ರತೆಯನ್ನೂ ನೀಡಲಾಗಿತ್ತು. ಅಲ್ಲದೇ ಇಂದು ಶುಕ್ರವಾರವಾದ ಕಾರಣ ಮುಸ್ಲಿಂರಲ್ಲಿ ಬಹುತೇಕರು ಮಸೀದಿಗೆ ತೆರಳುತ್ತಾರೆ. ಇದನ್ನೆಲ್ಲಾ ನೋಡಿಕೊಂಡು ಪಕ್ಕಾ ಪ್ಲಾನ್ ಮಾಡಿ ಗ್ಯಾಂಗ್ ದರೋಡೆ ಮಾಡಿದೆ ಎನ್ನಲಾಗಿದೆ. ಅಲ್ಲದೆ ಬ್ಯಾಂಕ್ ಸಿಸಿ ಕ್ಯಾಮೆರಾ ಕೂಡಾ ಇಂದೇ ರಿಪೇರಿಗೆ ನೀಡಿದ್ದರು. ಹಾಗಾಗಿ ಎಲ್ಲವನ್ನೂ ತಿಳಿದೇ ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಲಾಗಿದೆ.
ಇದನ್ನೂ ಓದಿ : ಕೆನಡಾದಲ್ಲಿ ಕನ್ನಡದ ಕಂಪು.. ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲಿಯೇ ಮಾತನಾಡಿದ ಚಂದ್ರ ಆರ್ಯ..!