Download Our App

Follow us

Home » ರಾಜಕೀಯ » ಬೆಂಗಳೂರು ಪೊಲೀಸರ ವಿರುದ್ಧ ಮಂಡ್ಯ MLA ಗಂಭೀರ ಆರೋಪ..!

ಬೆಂಗಳೂರು ಪೊಲೀಸರ ವಿರುದ್ಧ ಮಂಡ್ಯ MLA ಗಂಭೀರ ಆರೋಪ..!

ಬೆಂಗಳೂರು : ಬೆಂಗಳೂರು ಪೊಲೀಸರ ವಿರುದ್ಧ ಮಂಡ್ಯ MLA ಗಂಭೀರ ಆರೋಪ ಮಾಡಿದ್ದಾರೆ. MLA ರವಿಕುಮಾರ್​ಗೌಡ ರೋಲ್​​ ಕಾಲ್​​ ಎಂದು ಗುಡುಗಿದ್ದಾರೆ. ದರ್ಶನ್​​ ಸೇರಿ ಸೆಲೆಬ್ರಿಟಿಗಳಿಗೆ ನೋಟಿಸ್​ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವಧಿ ಮೀರಿ ಓಪನ್​ ಇದ್ದ ಪಬ್​​ ಮೇಲೆ ಏಕೆ ಕ್ರಮವಿಲ್ಲ ಎಂದು MLA ರವಿಕುಮಾರ್​ಗೌಡ ಪ್ರಶ್ನೆ ಮಾಡಿದ್ದಾರೆ. ಪೊಲೀಸ್​ ತಪ್ಪು ಮುಚ್ಚಿ ಹಾಕಲು ಸೆಲೆಬ್ರಿಟಿಗಳಿಗೆ ನೋಟಿಸ್​ ಎಂದು ಕಿಡಿ ಕಾರಿದ್ದಾರೆ. ಬೆಂಗಳೂರು ಪೊಲೀಸರ ವಿರುದ್ಧ MLA ಹರಿಹಾಯ್ದಿದ್ದಾರೆ.

ಗೃಹ ಸಚಿವರೇ ಪೊಲೀಸರ ಮಾತು ಕೇಳಬೇಡಿ, CCTV ಚೆಕ್​​ ಮಾಡಿ. ನಿಮ್ಮ ಪೊಲೀಸರು ಜೆಟ್​ ಲ್ಯಾಗ್​​​ ಪಬ್​ಗೆ ಹೋಗೇ ಇಲ್ಲ. 24 ಗಂಟೆಯಲ್ಲಿ ಇನ್ಸ್​ಪೆಕ್ಟರ್​​, ACP, DCPಯನ್ನು ಸಸ್ಪೆಂಡ್ ಮಾಡಿ, ಜೆಟ್​ ಲ್ಯಾಗ್​​​ ಪಬ್​​ ಮುಂಜಾನೆವರೆಗೆ ತೆರೆಯೋಕೆ ಬಿಟ್ಟಿದ್ಯಾರು..? ಎಂದು ಪ್ರಶ್ನಿಸಿದ್ದಾರೆ.

ನೆಲದ ಕಾನೂನು ರಾತ್ರಿ 1 ಗಂಟೆವರೆಗೂ ಮಾತ್ರ ಅವಕಾಶ ಕೊಟ್ಟಿದೆ, ಮುಂಜಾನೆ 3.30ರವರೆಗೆ ಓಪನ್​ ಆಗಲು ಬಿಟ್ಟಿದ್ದೇಕೆ..? ಜೆಟ್​ ಲ್ಯಾಗ್​​ ಪಬ್​​ ಬಳಿಗೆ ಹೋಗಿದ್ರೆ ವಿಡಿಯೋ ರಿಲೀಸ್ ಮಾಡಿ. ಪಬ್​, ಬಾರ್​​ ಜತೆ ಪೊಲೀಸರು ಅಡ್ಜೆಸ್ಟ್​ ಮೆಂಟ್​ ಆಗಿದ್ದಾರೆ.

ಚರ್ಚ್​ ಸ್ಟ್ರೀಟ್​ನಲ್ಲಿ ಎಷ್ಟೊತ್ತಿನವರೆಗೆ ಪಬ್​​, ಕ್ಲಬ್​, ಬಾರ್​ ಓಪನ್​ ಇರ್ತೆವೆ. ಪಬ್​, ಬಾರ್​​, ಕ್ಲಬ್​ ಮೇಲೆ ಕ್ರಮ ಕೈಗೊಳ್ಳೋಕೆ ಆಗ್ತಾ ಇಲ್ಲ, ಗ್ರಾಹಕರಿಗೆ ನೋಟಿಸ್​ ಕೊಡೋದಾದ್ರೆ ದಿನಕ್ಕೆ ಲಕ್ಷ ಮಂದಿಗೆ ಕೊಡ್ಬೇಕು. ಕನ್ನಡ ಬೋರ್ಡ್​ಗೆ ಹೋರಾಡಿದ ನಾರಾಯಣಗೌಡರ ಅರೆಸ್ಟ್ ಮಾಡ್ತೀರಿ.

ರೂಲ್ಸ್ ಬ್ರೇಕ್​ ಮಾಡಿದ ಪಬ್​, ಕ್ಲಬ್​, ಬಾರ್​ಗಳ ಮೇಲೆ ಏಕೆ ಕ್ರಮವಿಲ್ಲ ಎಂದು ಬೆಂಗಳೂರಿನಲ್ಲಿ ಮಂಡ್ಯ ಶಾಸಕ ರವಿಕುಮಾರ್​​ ಗೌಡ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಬೆಳಗಾವಿ : 9 ನವಿಲುಗಳಿಗೆ ವಿಷದ ಕಾಳು ಹಾಕಿ ಕೊಂದ ದುಷ್ಕರ್ಮಿಗಳು..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here