ಮಂಡ್ಯ : ಚಡ್ಡಿಗ್ಯಾಂಗ್ ಮಾದರಿಯಲ್ಲಿಯೇ ದುಷ್ಕರ್ಮಿಗಳು ಒಂಟಿ ಮನೆಗೆ ನುಗ್ಗಿ ವ್ಯಕ್ತಿಯೋರ್ವರನ್ನು ಬರ್ಬರ ಹತ್ಯೆ ಮಾಡಿದ ಘಟನೆ ಪಾಂಡವಪುರದ ಜಯಂತಿ ನಗರದ ಸಿಪಿಎಡ್ ಕಾಲೇಜ್ ಬಳಿ ನಡೆದಿದೆ. ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಒಂಟಿ ಮನೆ ಮಾಲಕ ರಮೇಶ್ (55) ಎಂಬಾತ ಹತ್ಯೆಗೊಳಗಾದವರು.
ಒಂಟಿ ಮನೆಯ ಬಾಗಿಲು ಮುರಿದು ರಮೇಶ್ ಎಂಬುವವರನ್ನು ಹತ್ಯೆ ಮಾಡಿದ್ದಲ್ಲದೆ ಮಹಿಳೆ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಎಚ್ಚರಗೊಂಡು ರಮೇಶ್ ಅವರ ಪತ್ನಿ ದುಷ್ಕರ್ಮಿಗಳ ಜೊತೆ ದಿಟ್ಟ ಹೋರಾಟ ನಡೆಸಿದ್ದಾರೆ. ಕುಸಿದು ಬಿದ್ದು ನಾಟಕ ಆಡಿ ಕೊಡಲಿಯಿಂದ ದುಷ್ಕರ್ಮಿಗಳ ಮೇಲೆ ಯಶೋಧ ಅಟ್ಯಾಕ್ ಮಾಡಿದ್ದಾರೆ.
ಇನ್ನು ಯಶೋಧ ಚಾಲಕಿತನದಿಂದ ಓರ್ವ ದುಷ್ಕರ್ಮಿ ಲಾಕ್ ಆಗಿದ್ದು, ಐವರು ಕಳ್ಳರು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ ಓರ್ವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ಚೈತ್ರಾದ್ದು ಬರೀ ಡೌವ್ಗಳು ಸರ್’ - ರಜತ್ ಮಾತಿಗೆ ಬಿದ್ದು ಬಿದ್ದು ನಕ್ಕ ಸುದೀಪ್..!