ಮಂಡ್ಯ : ತೂಕದಲ್ಲಿ ಮೋಸ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಮೂರು ಜ್ಯುವೆಲರ್ಸ್ ಶಾಪ್ಗಳ ಮೇಲೆ ಕರ್ನಾಟಕ ಆಹಾರ ಆಯೋಗ ಹಾಗೂ ಅಳತೆ ಮತ್ತು ತೂಕ ಮಾಪನ ಅಧಿಕಾರಿಗಳು ದಾಳಿ ನಡೆಸಿ, ಸೀಜ್ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರದಲ್ಲಿ ಶನಿವಾರ ನಡೆದಿದೆ.
ಈ ಶಾಪ್ಗಳಲ್ಲಿ ಗ್ರಾಹಕರು ಚಿನ್ನವನ್ನು ಖರೀದಿಸುವಾಗ ಅಳತೆಯ ವೇಳೆ ಒಂದರಿಂದ ಒಂದೂವರೆ ಗ್ರಾಂ ಚಿನ್ನವನ್ನ ಲಪಟಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಪಟ್ಟಣದ ಮೂರು ಜ್ಯುವೆಲರ್ಸ್ ಶಾಪ್ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಇನ್ನು ದಾಳಿ ವೇಳೆ ತೂಕದ ಮಾಪನಗಳನ್ನು ಪರಿಶೀಲಿಸಿದಾಗ ಸುಮಾರು ಒಂದರಿಂದ ಒಂದೂವರೆ ಗ್ರಾಂ ಮೋಸ ಮಾಡಿರುವುದು ಕಂಡು ಬಂದಿದೆ. ತಕ್ಷಣ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ನೀಡಿದರಲ್ಲದೆ, ಮೂರು ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ : ಕೊಲ್ಲಾಪುರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್ – ಓರ್ವ ಸಾ*ವು , 6 ಮಂದಿಗೆ ಗಾಯ..!
Post Views: 99