ಚೆನ್ನೈ : ತಮಿಳುನಾಡಿನ ಪಕ್ಕೋಟ್ನಲ್ಲಿ ನಡೆದ ನಂಬಲಾಸಾಧ್ಯವಾದ ಘಟನೆಯ ವಿಡಿಯೋವೊಂದು ಎಲ್ಲರನ್ನೂ ಬೆರಗುಗೊಳಿಸಿದೆ. ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಎರಡು ಬಸ್‌ಗಳ ನಡುವೆ ಸಿಕ್ಕಿಹಾಕಿಕೊಂಡ ಬಳಿಕವೂ ಏನೂ ಆಗದೆ ಪಾರಾಗಿದ್ದಾರೆ.
ದೃಶ್ಯವನ್ನು ಕಂಡು, ಸ್ಥಳದಲ್ಲಿದ್ದ ಎಲ್ಲರಿಗೂ ಹೃದಯ ಬಡಿತವೇ ನಿಂತ ಅನುಭವವಾಗಿದೆ ಎಂದು ತಿಳಿದುಬಂದಿದೆ. ಬಸ್‌ಗಳು ಒಂದಕ್ಕೊಂದು ಎದುರಾಗಿ ಅಪಾಯಕಾರಿಯಾಗಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ವ್ಯಕ್ತಿ ಎರಡು ಬಸ್‌ಗಳ ನಡುವೆ ಕೆಲವು ಸೆಕೆಂಡುಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದು, ಪ್ರಾಣ ಉಳಿಯುವುದೇ ಅಸಾಧ್ಯ ಎಂದು ಸ್ಥಳದಲ್ಲಿದ್ದವರು, ವಿಡಿಯೋ ನೋಡಿದವರು ಅಂದುಕೊಂಡಿದ್ದರು. ಆದರೆ ಪವಾಡವೆಂಬಂತೆ ಇಬ್ಬರೂ ಬಸ್ ಚಾಲಕರು ಸಕಾಲಕ್ಕೆ ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ತಪ್ಪಿದೆ. ವ್ಯಕ್ತಿ ಗ್ರೇಟ್ ಎಸ್ಕೇಪ್ ಆಗಿದ್ದು, ಸಾವಿನ ದವಡೆಯಿಂಂದ ಪಾರಾಗಿದ್ದಾನೆ.
ಇದನ್ನೂ ಓದಿ : ಪೊಲೀಸ್ ಕಚೇರಿಯಲ್ಲೇ “ರಾಸಲೀಲೆ” ನಡೆಸಿದ್ದ Dysp ರಾಮಚಂದ್ರಪ್ಪ ಅರೆಸ್ಟ್!
Post Views: 90