Download Our App

Follow us

Home » ಸಿನಿಮಾ » ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕ್ಕುಳಿ’ ಚಿತ್ರ – 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ..!

ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕ್ಕುಳಿ’ ಚಿತ್ರ – 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ..!

ಒಟಿಟಿ ಪ್ಲಾಟ್ಫಾರ್ಮ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುವಲ್ಲಿ ಅನೇಕ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಅದರಲ್ಲೂ ‘ಜೀ5’ ಸದಾಭಿರುಚಿ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸುತ್ತದೆ. ಇದೇ ಸೆಪ್ಟಂಬರ್ 13ರಂದು Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಂಡ ‘ನುನಕ್ಕುಳಿ’ ಚಿತ್ರ ದಾಖಲೆ ಬರೆದಿದೆ.

100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇತ್ತೀಚೆಗಷ್ಟೇ ನಡೆದ ಕೇರಳದ ಕ್ರೀಡಾ ಸಮಾರಂಭವೊಂದರಲ್ಲಿ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಅವರ ಸಮ್ಮುಖದಲ್ಲಿ ‘ನುನಕ್ಕುಳಿ’ ಚಿತ್ರದ 10,000 ಸ್ಕ್ವೇರ್ ಫೀಟ್ ಪೋಸ್ಟರ್ ನ್ನು ಜೀ5 ಅನಾವರಣ ಮಾಡಿದೆ. ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರ ‘ನುನಕ್ಕುಳಿ’ ಮಲಯಾಳಂ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ವೀಕ್ಷಣೆ ಮಾಡಬಹುದು.

ಈ ಸಿನಿಮಾ ಆಗಸ್ಟ್‌ 15 ರಂದು ಚಿತ್ರಮಂದಿರದಲ್ಲಿ ರಿಲೀಸ್‌ ಆಗಿತ್ತು. ಕೇವಲ 10 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಇದುವರೆಗೂ 20 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸ್ಟಾರ್‌ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾಗಳಿಗೆ ಒಟಿಟಿಯಲ್ಲಿ ಇರುವ ಕ್ರೇಜ್‌ ದೃಷ್ಟಿಯಲ್ಲಿಟ್ಟುಕೊಂಡು ಥಿಯೇಟರ್‌ಗೆ ಬರುತ್ತಿದ್ದಂತೆ ಜಿ 5, ಈ ನುನಕ್ಕುಳಿ ಚಿತ್ರವನ್ನು ಖರೀದಿಸಿದೆ.

ನುನಕ್ಕುಳಿಯಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದೃಶ್ಯಂ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಜಿತು ಜೋಸೆಫ್ ನುನಕ್ಕುಳಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯು ಐಟಿ ಅಧಿಕಾರಿಯ ಲ್ಯಾಪ್‌ಟಾಪ್ ವಶಕ್ಕೆ ಪಡೆದಾಗ, ಆತ ಅದರಲ್ಲಿನ ಅಶ್ಲೀಲ ವಿಡಿಯೋಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ತೆಗೆದುಹಾಕುತ್ತಾನೆ ಎಂಬುದೇ ತಿರುವು.

ಇದನ್ನೂ ಓದಿ : ಚಾಲನೆ ವೇಳೆ BMTC ಡ್ರೈವರ್​​ಗೆ ಹಾರ್ಟ್ ಅಟ್ಯಾಕ್​​ – ಟ್ರಾಫಿಕ್​ ಪೊಲೀಸ್​ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಅತ್ತೆ-ಮಾವನನ್ನ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಅಳಿಯ..!

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಪಾಪಿ ಪತಿ ಹೆಣ್ಣು ಕೊಟ್ಟ ಅತ್ತೆ ಮಾವನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

Live Cricket

Add Your Heading Text Here