Download Our App

Follow us

Home » ರಾಜ್ಯ » ಹೊಸ ವರ್ಷಕ್ಕೆ ಪೊಲೀಸ್​ ಇಲಾಖೆಯಲ್ಲಿ ಮೇಜರ್ ಸರ್ಜರಿ.. 67 IAS-IPS ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ..!

ಹೊಸ ವರ್ಷಕ್ಕೆ ಪೊಲೀಸ್​ ಇಲಾಖೆಯಲ್ಲಿ ಮೇಜರ್ ಸರ್ಜರಿ.. 67 IAS-IPS ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ..!

ಬೆಂಗಳೂರು : ಇತ್ತೀಚೆಗಷ್ಟೆ ಏಳು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮತ್ತೆ ಕೆಲ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕ ಸರ್ಕಾರ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ಮಾಡಿದೆ.

67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇಂದಿನಿಂದಲೇ (ಜ.1) ಅನ್ವಯವಾಗುವಂತೆ ಐಎಎಸ್ ಅಧಿಕಾರಿಗಳಿಗೆ ವಿವಿಧ ಶ್ರೇಣಿಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.

ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ

  1. ರಮಣ್​ ಗುಪ್ತಾ : ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ
  2. ಚೇತನ್ ಸಿಂಗ್ ರಾಥೋಡ್ : ಐಜಿಪಿ, ಈಶಾನ್ಯ ವಲಯ (ಬೆಳಗಾವಿ)
  3. ವಿಕಾಸ್ ಕುಮಾರ್ : ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ
  4. ಅಮಿತ್ ಸಿಂಗ್ : ಐಜಿಪಿ, ಪಶ್ಚಿಮ ವಲಯ(ಮಂಗಳೂರು)
  5. ವಂಶಿಕೃಷ್ಣ : ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು
  6. ಕಾರ್ತಿಕ್ ರೆಡ್ಡಿ : ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ
  7. ಕುಲದೀಪ್ ಕುಮಾರ್ ಜೈನ್ : ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ
  8. ಸಂತೋಷ್ ಬಾಬು : ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ
  9. ಇಶಾ ಪಂಥ್ : ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ
  10. ಜಿ.ಸಂಗೀತಾ : ಡಿಐಜಿ, ಸಿಐಡಿ ಅರಣ್ಯ ಘಟಕ
  11. ಸೀಮಾ ಲಾಟ್ಕರ್ : ಡಿಐಜಿ, ಮೈಸೂರು ಕಮಿಷನರ್ ಆಗಿ ಮುಂದುವರಿಕೆ
  12. ರೇಣುಕಾ ಕೆ.ಸುಕುಮಾರ್ : ಡಿಐಜಿಯಾಗಿ ಬಡ್ತಿ, ಡಿಸಿಆರ್​ಇ, ಬೆಂಗಳೂರು
  13. ಡಾ.ಭೀಮಾಶಂಕರ ಗುಳೇದ್ : ಬೆಳಗಾವಿ ಎಸ್​ಪಿಯಾಗಿ ಮುಂದುವರಿಕೆ ಮಾಡಲಾಗಿದೆ.
  14. ಎನ್​ ಶಶಿ ಕುಮಾರ್ : ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ಹುಬ್ಬಳ್ಳಿ-ಧಾರವಾಡ ನಗರ
  15. ಡಾ.ವೈ.ಎಸ್. ರವಿ ಕುಮಾರ್ : ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್​ ಆಗಿ ಬಡ್ತಿ (ಇಂಟಲಿಜೆನ್ಸ್), ಬೆಂಗಳೂರು
  16. 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ಮಾಡಲಾಗಿದೆ.

ಇದನ್ನೂ ಓದಿ : ಹೊಸ ವರ್ಷಕ್ಕೆ ಭರ್ಜರಿ ‘ಎಣ್ಣೆ’ ಸೇಲ್​ – ಅಬಕಾರಿ ಇಲಾಖೆಗೆ ಒಂದೇ ದಿನ ಬರೋಬ್ಬರಿ 308 ಕೋಟಿ ಆದಾಯ..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ಮನೆಮಂದಿಗೆ ಸಿಕ್ತು ಕಿಚ್ಚನ ಕೈರುಚಿ ಸವಿಯೋ ಭಾಗ್ಯ.. ಎಲ್ಲರೂ ಫುಲ್ ಹ್ಯಾಪಿ..!

ಬಿಗ್ ಬಾಸ್ ಸೀಸನ್ 11 ಮನೆಗೆ ಈ ವಾರ ಪ್ರೀತಿಯ ಸುರಿಮಳೆಯನ್ನೇ ಸುರಿದಿದೆ. ಇಷ್ಟು ದಿನ ಮನೆಯವರಿಂದ ದೂರ ಇದ್ದು ಸೊರಗಿ ಹೋಗಿದ್ದ ಸ್ಪರ್ಧಿಗಳಿಗೆ ತಮ್ಮ ಪ್ರೀತಿ

Live Cricket

Add Your Heading Text Here