ಬೆಂಗಳೂರು : ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರ ಆಡಳಿತ ವರ್ಗದಲ್ಲಿ ಮೇಜರ್ ಸರ್ಜರಿ ಮಾಡುತ್ತಿದೆ. ಇತ್ತೀಚಿಗೆ, ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದೀಗ, ಕರ್ನಾಟಕ ಸರ್ಕಾರ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್ ಕುಮಾರ್ ಎಸ್. ನಿರ್ದೇಶಿಸಿದ್ದಾರೆ.
21 IAS ಅಧಿಕಾರಿಗಳ ವರ್ಗಾವಣೆ ಪಟ್ಟಿ ಇಲ್ಲಿದೆ : –
- ಮೈಸೂರು ಡಿಸಿ ಕೆ.ವಿ.ರಾಜೇಂದ್ರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ವರ್ಗ
- ವಿ.ರಾಮ್ ಪ್ರಸಾತ್ ಮನೋಹರ್ ವರ್ಗಾವಣೆ – ನಗರಾಭಿವೃದ್ಧಿ ಹೆಚ್ಚುವರಿ ಕಾರ್ಯದರ್ಶಿಯಾಗಿ ನಿಯೋಜನೆ
- ಬೆಳಗಾವಿ ಡಿಸಿ ನಿತೇಶ್ ಪಾಟೀಲ್ - ಸಣ್ಣ ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕ
- ಪಂಚಾಯತ್ ರಾಜ್ ಕಮಿಷನರ್ ಆಗಿ ಡಾ.ಅರುಂದತಿ ಚಂದ್ರಶೇಖರ್ ವರ್ಗಾವಣೆ
- ಜವಳಿ ಅಭಿವೃದ್ಧಿ ನಿರ್ದೇಶಕರಾಗಿ ಜ್ಯೋತಿ ವರ್ಗಾವಣೆ
- ಸಿ.ಎನ್ ಶ್ರೀಧರ ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ವರ್ಗ
- ಲಕ್ಷ್ಮೀಕಾಂತ ರೆಡ್ಡಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ
- ರಾಯಚೂರು ಡಿಸಿ ಚಂದ್ರಶೇಖರ್ ನಾಯಕ್ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
- ವಿಜಯಮಾಂತೇಶ್ಗೆ ಹಾವೇರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ
- ಬೀದರ್ ಡಿಸಿ ಗೋವಿಂದ ರೆಡ್ಡಿ ಗದಗ ಡಿಸಿಯಾಗಿ ವರ್ಗಾವಣೆ
- ಹಾವೇರಿ ಡಿಸಿ ರಘುನಂದನ್ ಖಜಾನೆ ಆಯುಕ್ತರಾಗಿ ವರ್ಗಾವಣೆ
- ದಾವಣಗೆರೆ ಡಿಸಿಯಾಗಿ ಡಾ.ಗಂಗಾಧರಸ್ವಾಮಿ ವರ್ಗಾವಣೆ
- ರಾಯಚೂರು ಡಿಸಿಯಾಗಿ ನಿತೀಶ್ ಕೆ ವರ್ಗಾವಣೆ
- ಮೊಹ್ಮದ್ ರೋಷನ್ಗೆ ಬೆಳಗಾವಿ ಡಿಸಿ ಹುದ್ದೆ
- ಶಿಲ್ಪಾ ಶರ್ಮಾ ಬೀದರ್ ಡಿಸಿಯಾಗಿ ವರ್ಗಾವಣೆ
- ದಿಲೇಶ್ ಸಸಿ ಸಸಿ ಇ-ಗವರ್ನೆನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
- ಲೋಕಂಡೆ ಸ್ನೇಹಾಲ್ ಸುಧಾಕರ್ ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ
- ಶ್ರೀರೂಪಾ ಪಶುಸಂಗೋಪನಾ ಇಲಾಖೆ ಕಮಿಷನರ್
- ಜಿ.ಎಂ.ವಿಠಲರಾವ್- ಬಾಗಲಕೋಟೆ ಪುನರ್ವಸತಿ ಕೇಂದ್ರದ ಜಿಎಂ
- ಹೇಮಂತ್ ಎನ್ ಶಿವಮೊಗ್ಗ ಜಿಪಂ ಸಿಇಓ ಆಗಿ ವರ್ಗಾವಣೆ
- ಮಹ್ಮದ್ ಅಲಿ ಅಕ್ರಂ ಶಾ-ವಿಜಯನಗರ ಜಿಪಂ ಸಿಇಓಆಗಿ ವರ್ಗಾವಣೆ
ಇದನ್ನೂ ಓದಿ : ಉಡುಪಿಯಲ್ಲಿ ಭಾರಿ ಮಳೆಗೆ ಮತ್ತೊಂದು ಬಲಿ – ಮನೆಯ ಮೇಲೆ ಮಣ್ಣು ಕುಸಿದು ಮಹಿಳೆ ಸಾ*ವು..!
Post Views: 136