Download Our App

Follow us

Home » ಜಿಲ್ಲೆ » ಮಡಿಕೇರಿ : ಕೆಲಸಕ್ಕೆಂದು ರೆಡಿಯಾಗುತ್ತಿದ್ದ ವೇಳೆ ಹಠಾತ್‌ ಹೃದಯಾಘಾತ – ಯುವತಿ ಸಾ*ವು..!

ಮಡಿಕೇರಿ : ಕೆಲಸಕ್ಕೆಂದು ರೆಡಿಯಾಗುತ್ತಿದ್ದ ವೇಳೆ ಹಠಾತ್‌ ಹೃದಯಾಘಾತ – ಯುವತಿ ಸಾ*ವು..!

ಮಡಿಕೇರಿ : ಕೆಲಸಕ್ಕೆಂದು ಹೊರಡಲೆಂದು ರೆಡಿಯಾಗುತ್ತಿದ್ದ ಯುವತಿಯೋರ್ವಳು ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ. 24 ವರ್ಷದ ನಿಲಿಕಾ ಪೊನ್ನಪ್ಪ ಮೃತ ಯುವತಿ.

ನಿಲಿಕಾ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಇಂದು ಕರ್ತವ್ಯಕ್ಕೆ ಹೊರಟಾಗ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ನಿಲಿಕಾ ವಾಪಸ್ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ. ತಾಯಿ ಏನಾಯಿತೆಂದು ಹಿಂದಿನಿಂದ ಬಂದು ಕೇಳುವಷ್ಟರಲ್ಲಿ ನಿಲಿಕಾ ಪ್ರಾಣ ಕಳೆದುಕೊಂಡಿದ್ದರು. ಆಸ್ಪತ್ರೆಗೆ ಸಾಗಿಸಿದರೂ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ಮೈಸೂರು : ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್‌ ನೀಡಿದ್ದ ಶಿರಸ್ತೇದಾರ್​ ಸಸ್ಪೆಂಡ್..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here