‘ಲವ್ ಮಾಕ್ಟೈಲ್ 2′ ನಟಿ ರೆಚೆಲ್ ಡೇವಿಡ್ ಅವರು ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ರೆಚೆಲ್ ಅವರು ಆ್ಯಂಟೋ ಅವರನ್ನು ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆಯಾಗಿದ್ದಾರೆ. ನಟಿ ಬಿಳಿ ಬಣ್ಣದ ಗೌನ್ನಲ್ಲಿ ಮಿಂಚಿದ್ರೆ, ವರ ಕಪ್ಪು ಬಣ್ಣದ ಸೂಟ್ ಧರಿಸಿದ್ದರು. ಚರ್ಚ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ರೆಚೆಲ್ ಜೋಡಿ ಉಂಗುರ ಬದಲಾಯಿಸಿಕೊಂಡು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಸಿಹಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ರೆಚೆಲ್ ಡೇವಿಡ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿಯನ್ನು ಬಾಲ್ಯದಿಂದಲೇ ಇಷ್ಟಪಡುತ್ತಿದ್ದ, ಆದಿಯ ಪ್ರತಿ ಹಂತವನ್ನು ಗಮನಿಸಿಕೊಂಡು ಬಂದು ಲವ್ ಸ್ಟೋರಿ ಬ್ರೇಕ್ ಅಪ್ ಸ್ಟೋರಿ, ಮದುವೆ, ಹೆಂಡ್ತಿ ಸಾವು ಎಲ್ಲಾದ್ರ ಬಗ್ಗೆಯೂ ತಿಳ್ಕೊಂಡು, ಇವತ್ತಿಗೂ ಆದಿಗಾಗಿ ಕಾಯ್ತಿರೋ ಹುಡುಗಿಯಾಗಿ ರೆಚೆಲ್ ಅಭಿನಯಿಸಿದ್ದರು.
ಇನ್ನೂ ನಟಿ ರೆಚೆಲ್ ಮದುವೆಗೆ ನಟಿ ಮಿಲನಾ ನಾಗರಾಜ್, ಅಮೃತ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಮಂದಿ ಮಧುವೆಗೆ ಶುಭ ಕೋರಿದ್ದಾರೆ. ಮೂಲತಃ ಬೆಂಗಳೂರಿನ ರೆಚೆಲ್ ಡೇವಿಡ್, ಮಲಯಾಲಂ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು.
ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆ ಇರುಪತಿಯೊನ್ನಾಮ್ ನೂಟಾನ್ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು. ಇದಾದ ಬಳಿಕ ಮತ್ತೊಂದು ಮಲಯಾಲಂ ಸಿನಿಮಾ ಒರೊನೊನ್ನಾರ ಪ್ರಣಯಕಥಾ ಹಾಗೂ ಕಾವಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಇದಾದ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚೇಲ್ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ನಟಿಸಿ ಫೇಮಸ್ ಆದರು.
ಇದನ್ನೂ ಓದಿ : ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದು..!
Post Views: 82