Download Our App

Follow us

Home » ಅಪರಾಧ » ಪ್ರೀತಿ ಒಲ್ಲೆ ಎಂದಿದ್ದಕ್ಕೆ ಆಫೀಸ್​ ಪಾರ್ಕಿಂಗ್​​ನಲ್ಲೇ ಯುವತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಭಯಾನಕ ಕೃತ್ಯ ಸೆರೆ!

ಪ್ರೀತಿ ಒಲ್ಲೆ ಎಂದಿದ್ದಕ್ಕೆ ಆಫೀಸ್​ ಪಾರ್ಕಿಂಗ್​​ನಲ್ಲೇ ಯುವತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಭಯಾನಕ ಕೃತ್ಯ ಸೆರೆ!

ಪುಣೆ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ನೂರಾರು ಜನರ ಮುಂದೆಯೇ ಕೆಲಸ ಮಾಡುವ ಆಫೀಸ್​ ಪಾರ್ಕಿಂಗ್​​ನಲ್ಲೇ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯರವಾಡದಲ್ಲಿ ನಡೆದಿದೆ.

ಮೃತ ಯುವತಿ ಶುಭದಾ
                          ಯುವತಿ ಶುಭದಾ

ಹತ್ಯೆಯಾದ ಯುವತಿಯನ್ನು ಕತ್ರಜ್ ನಿವಾಸಿ 28 ವರ್ಷದ ಶುಭದಾ ಶಂಕರ್ ಕೊಡಾರೆ ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು 30 ವರ್ಷದ ಕೃಷ್ಣ ಸತ್ಯನಾರಾಯಣ್ ಕನೋಜ ಎಂದು ಗುರುತಿಸಲಾಗಿದೆ. ಶುಭದಾ ಹಾಗೂ ಕೃಷ್ಣ ಇಬ್ಬರೂ ಒಂದೇ ಖಾಸಗಿ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಯುವಕ ಯುವತಿ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದೆ. ಇದೇ ಕಾರಣಕ್ಕೆ ಆರೋಪಿ ಕೃಷ್ಣ ಸತ್ಯನಾರಾಯಣ್ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎನ್ನಲಾಗ್ತಿದೆ.

ಹಲ್ಲೆಯಿಂದ ಗಾಯಗೊಂಡ ಯುವತಿಯನ್ನು ಸಾರ್ವಜನಿಕರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೇ ಶುಭದಾ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಕೃಷ್ಣ ಸತ್ಯನಾರಾಯಣ್ ಕನೋಜ ಘಟನೆ ಬಳಿಕ ತನ್ನ ಕೈಯಲ್ಲಿದ್ದ ಮಚ್ಚು ಎಸೆದ ತಕ್ಷಣ ಸ್ಥಳೀಯರು ಜನರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ಕನ್ನಡದ ಹೆಸರಾಂತ ನಟನಿಗೆ ಒಲಿದ ಗೌರವ – ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ಕುಮಾರ್ ರಾಯಭಾರಿ!

 

Leave a Comment

DG Ad

RELATED LATEST NEWS

Top Headlines

ಕೈಯಲ್ಲಿ ಮಚ್ಚು ಹಿಡಿದು ಮಾಸ್​ ಅವತಾರ ತಾಳಿದ ‘ಅಭಿನಯ ಚತುರ’ – ‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ರಿಲೀಸ್!

ಬೆಂಗಳೂರು :  ಅಭಿನಯ ಚತುರ ನೀನಾಸಂ ಸತೀಶ್ ನಟಿಸುತ್ತಿರುವ ಅಶೋಕ ಬ್ಲೇಡ್ ಸಿನಿಮಾವೀಗ ಶೀರ್ಷಿಕೆ ಬದಲಾವಣೆಯೊಂದಿಗೆ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಅಶೋಕ್ ಬ್ಲೇಡ್ ಬದಲಿಗೆ ‘ದಿ ರೈಸ್

Live Cricket

Add Your Heading Text Here