Download Our App

Follow us

Home » ರಾಜ್ಯ » ರಾಜ್ಯಾದ್ಯಂತ ಲೋಕಾಯುಕ್ತ ದಾಳಿ : ಹತ್ತು ಅಧಿಕಾರಿಗಳ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ.. ಏನೆಲ್ಲಾ ವಶಕ್ಕೆ? ಇಲ್ಲಿದೆ ವಿವರ..!

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ : ಹತ್ತು ಅಧಿಕಾರಿಗಳ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ.. ಏನೆಲ್ಲಾ ವಶಕ್ಕೆ? ಇಲ್ಲಿದೆ ವಿವರ..!

ಬೆಂಗಳೂರು : ಆದಾಯಕ್ಕೂ ಮೀರಿದ ಅಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.  ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಸದ್ಯ ಉಳಿದ ಭ್ರಷ್ಟರಿಗೂ ನಡುಕ ಶುರುವಾಗಿದೆ. 10 ಸರ್ಕಾರಿ ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ ಎಂಬುದಕ್ಕೆ ಇಲ್ಲಿದೆ ವಿವರ.

1. ಎ ಹನುಮಂತರಾಯಪ್ಪ, ಜೂನಿಯರ್ ಇಂಜಿನಿಯರ್ ಪ್ರಭಾರ, ಸಿವಿಲ್, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಕೆಆರ್ ಐಡಿಎಲ್ ಉಪ ವಿಭಾಗ, ಮಧುಗಿರಿ, ತುಮಕೂರು ಜಿಲ್ಲೆ
ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು ಆಸ್ತಿ ಪಾಸ್ತಿ ಮೌಲ್ಯ – 2,55,30,000 ರೂ.
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆಗಳು, ಕೃಷಿ ಜಮೀನು ಎಲ್ಲಾ ಸೇರಿ ಒಟ್ಟು ಮೌಲ್ಯ 2,30,00,000
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 40,000/- ನಗದು, ರೂ. 8,50,000 ಬೆಲೆ ಬಾಳುವ ಚಿನ್ನಾಭರಣಗಳು, 14,80,000/- ರೂ ಬೆಲೆ ಬಾಳುವ ವಾಹನಗಳು, 2,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು – ಒಟ್ಟು ಮೌಲ್ಯ 25,30,000 ರೂ.

2. ಹರ್ಷ, ಹೆಚ್. ಆರ್, ಇ.ಇ. ಲೋಕೋಪಯೋಗಿ ಇಲಾಖೆ, ಮಂಡ್ಯ ಜಿಲ್ಲೆ.
ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು ಆಸ್ತಿ ಪಾಸ್ತಿ ಮೌಲ್ಯ – 4,50,19,336
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 2 ವಾಸದ ಮನೆಗಳು, 15-30 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1.68.19.000 ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,50,000 ನಗದು, ರೂ. 10,00,000 ಬೆಲೆ ಬಾಳುವ ಚಿನ್ನಾಭರಣಗಳು, ರೂ 55,00.000/- ಬೆಲೆಬಾಳುವ ವಾಹನಗಳು, ರೂ 2,15,50,336 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 2,82,00,336 ರೂ.

3. ಬಿ. ರವಿ, ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಪಿ.ಜಿ. ಕೇಂದ್ರ, ಕೃಷ್ಣದೇವರಾಯ ವಿಶ್ವವಿದ್ಯಾಲಯ, ನಂದಿಹಳ್ಳಿ, ಬಳ್ಳಾರಿ ಜಿಲ್ಲೆ.
ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು ಆಸ್ತಿ ಪಾಸ್ತಿ ಮೌಲ್ಯ 2.16.12.400 ರೂ.
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7 ನಿವೇಶನಗಳು, 2 ವಾಸದ ಮನೆಗಳು. ಒಟ್ಟು ಮೌಲ್ಯ 1.57.10,000 ರೂ.
ಚರ ಆಸ್ತಿ- 59,800 ರೂ. ನಗದು, 9,12,600 ಬೆಲೆ ಬಾಳುವ ಚಿನ್ನಾಭರಣಗಳು, ರೂ 23.30.000 ಬೆಲೆಬಾಳುವ ವಾಹನಗಳು, ರೂ. 26.00,000 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು, ಒಟ್ಟು ಮೌಲ್ಯ – 59.02.400 ರೂ.

4) ಆರ್.ಆರ್.ಭಾಸ್ಕರ್, ಎಇಇ, ಹೆಚ್.ಬಿ.ಹಳ್ಳಿ, ಗದಗ್ ವಿದ್ಯುತ್ ಶಕ್ತಿ ನಿಗಮ
ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು 1.74.84.796 ಮೌಲ್ಯದ ಆಸ್ತಿ ಪಾಸ್ತಿ ಪತ್ತೆ
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 8 ನಿವೇಶನಗಳು. 3 ವಾಸದ ಮನೆಗಳು. 2 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1.40,35,000
ಚರ ಆಸ್ತಿ ಮೌಲ್ಯ – 76.550 ನಗದು, 20.00,000 ಬೆಲೆ ಬಾಳುವ ಚಿನ್ನಾಭರಣಗಳು, ರೂ 12,10,000 ಬೆಲೆಬಾಳುವ ವಾಹನಗಳು, ರೂ 1,63,246 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಒಟ್ಟು ಮೌಲ್ಯ – 34.49.796 ರೂ.

5. ಪಿ. ರವಿಕುಮಾರ್, ಎ.ಇ.ಇ. ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ, ಪ್ರಧಾನ ಕಛೇರಿ, ಹುಣಸೂರು ಉಪ ವಿಭಾಗ, ಮೈಸೂರು ಜಿಲ್ಲೆ
ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು 2,07,46,460 ಮೌಲ್ಯದ ಆಸ್ತಿಪಾಸ್ತಿ ಪತ್ತೆ
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 1 ವಾಸದ ಮನೆ. 1 ವಾಣಿಜ್ಯ ಸಂಕೀರ್ಣ, 5.9 ಎಕರೆ ಆಸ್ತಿ ಮಾರ್ಟ್ ಗೇಜ್, 4 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು1,78,60.000 ರೂ. ಮೌಲ್ಯ
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 560 ನಗದು, ರೂ. 13,30,500, ಬೆಲೆ ಬಾಳುವ ಚಿನ್ನಾಭರಣಗಳು, ರೂ 4,00,000 ಬೆಲೆಬಾಳುವ ವಾಹನಗಳು, ರೂ. 11,55.400 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು, ಒಟ್ಟು 28,86,460

6. ನೇತ್ರಾವತಿ. ಕೆ. ಆರ್. ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಕಛೇರಿ, ವಾಣಿಜ್ಯ ತೆರಿಗೆ ಇಲಾಖೆ, ಚಿಕ್ಕಮಗಳೂರು ಜಿಲ್ಲೆ.

ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು 1,98,48,000 ಮೌಲ್ಯದ ಆಸ್ತಿ ಪಾಸ್ತಿ ಪತ್ತೆ
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, ವಾಸದ ಮನೆ. ಎಲ್ಲಾ ಸೇರಿ ಒಟ್ಟು ಮೌಲ್ಯ 1,18,50,000 ರೂ.
ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 4.58,000/- ನಗದು. ರೂ. 7.77.360 ಚಿನ್ನಾಭರಣ, 10,00,000 ವಾಹನಗಳು, ರೂ 16,40.640 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಒಟ್ಟು ಮೌಲ್ಯ – 77,98,000 ರೂ.

7) ರೇಣುಕಮ್ಮ, ವಲಯ ಅರಣ್ಯಾಧಿಕಾರಿ, ಹೂವಿನ ಹಡಗಲಿ ವಲಯ, ಅರಣ್ಯ ಇಲಾಖೆ, ವಿಜಯನಗರ ಜಿಲ್ಲೆ.
ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು 2.77.65.265 ಮೌಲ್ಯದ ಆಸ್ತಿ ಪಾಸ್ತಿ ಪತ್ತೆ
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 2 ನಿವೇಶನಗಳು, 2 ವಾಸದ ಮನೆಗಳು, 1 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,91,48,000 ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2.09.000/- ನಗದು, ರೂ. 32,00,000 ಬೆಲೆ ಬಾಳುವ ಚಿನ್ನಾಭರಣಗಳು, ರೂ.29,00,000 ಬೆಲೆಬಾಳುವ ವಾಹನಗಳು, ರೂ 23,08.265 ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು, ಒಟ್ಟು ಮೌಲ್ಯ 86,17,265

8) ಎಂ. ಎನ್ ಯಜ್ನೇಂದ್ರ, ಎ.ಇ.ಇ. ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು.
ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು ಆಸ್ತಿಪಾಸ್ತಿ ಮೌಲ್ಯ 1,06,12,900 ರೂ.
ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 1 ವಾಸದ ಮನೆ, 2 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 66.00,000 ರೂ. ಚರ ಆಸ್ತಿಯ ಅಂದಾಜು ಮೌಲ್ಯ- ರೂ. 86.000/- ನಗದು, ರೂ. 31,26,900 ಬೆಲೆ ಬಾಳುವ ಚಿನ್ನಾಭರಣಗಳು, ರೂ. 8,00,000 ಬೆಲೆಬಾಳುವ ವಾಹನಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 40.12.900 ರೂ.

9. ಶಾಂತಕುಮಾರ್, ಇಇ, ಮೆಸ್ಕಾಂ, ಮಂಗಳೂರು
ಒಟ್ಟು 3 ಸ್ಥಳಗಳಲ್ಲಿ ಶೋಧನಾ
ಒಟ್ಟು 2,44,41,280 ಮೌಲ್ಯದ ಆಸ್ತಿ ಪಾಸ್ತಿ ಪತ್ತೆ
ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 2 ವಾಸದ ಮನೆಗಳು, ಒಟ್ಟು ಮೌಲ್ಯ 1,27,80,000 ರೂ.
ಚರ ಆಸ್ತಿಯ ಅಂದಾಜು ಮೌಲ್ಯ- ರೂ. 28.24.280 ಬೆಲೆ ಬಾಳುವ ಚಿನ್ನಾಭರಣಗಳು, ರೂ 9.60,000/- ಬೆಲೆಬಾಳುವ ವಾಹನಗಳು, ರೂ4,00,000 ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, 74,77,00 ಬ್ಯಾಂಕ್ ಉಳಿತಾಯ, ಒಟ್ಟು 1,16,61,280 ರೂ. ಮೌಲ್ಯದ ಚರ ಆಸ್ತಿ ಪತ್ತೆ

10) ಜಗನ್ನಾಥ ಜಿ. ಪಿ. ಆಹಾರ ನಿರೀಕ್ಷಕರು, ಹಾಸನ ತಾಲ್ಲೂಕು. ಹಾಸನ ಜಿಲ್ಲೆ.
ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
ಒಟ್ಟು ಆಸ್ತಿ ಪಾಸ್ತಿ ಮೌಲ್ಯ 1,90,30,000 ರೂ.
ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7 ನಿವೇಶನಗಳು, 1 ವಾಸದ ಮನೆ. ಒಟ್ಟು 1,68,83,000 ರೂ
ಚರ ಆಸ್ತಿ- 89.000 ನಗದು, 14,38,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, ರೂ 6.20,000 ಬೆಲೆಬಾಳುವ ವಾಹನಗಳು, ಒಟ್ಟು 21,47,000 ರೂ.

ಇದನ್ನೂ ಓದಿ : ಇಂದು ಮಧ್ಯಂತರ ಬಜೆಟ್ ಮಂಡನೆ – ನಿರ್ಮಲಾ ಸೀತಾರಾಮನ್‌ರಿಂದ ಬಂಪರ್ ಘೋಷಣೆಗಳ ನಿರೀಕ್ಷೆ..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here