Download Our App

Follow us

Home » ರಾಜ್ಯ » ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ – ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿದೆ? ಇಲ್ಲಿದೆ ವಿವರ..!

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ – ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿದೆ? ಇಲ್ಲಿದೆ ವಿವರ..!

ನಿನ್ನೆ (ಮೇ 07) ದೇಶದಲ್ಲೆಡೆ 3ನೇ ಹಂತದ ಮತದಾನ ಭರ್ಜರಿಯಾಗಿ ನಡೆದಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ವೋಟಿಂಗ್ ನಡೆದಿದೆ. ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ನಿನ್ನೆ ಅದ್ಧೂರಿ ತೆರೆ ಬಿದ್ದಿದ್ದು, ಈ ಮೂಲಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ವೋಟಿಂಗ್ ಮುಕ್ತಾಯ ಆಗಿದೆ. ಸುಡೋ ಬಿಸಿಲಿನಲ್ಲೂ ಬಂದು ಜನರು ಮತದಾನ ಮಾಡಿದ್ದಾರೆ. ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್ ಆಗಿದೆ? ಮೊದಲ ಹಂತದ ಚುನಾವಣೆಯಲ್ಲಿ ಎಷ್ಟು ಪ್ರಮಾಣದ ಮತದಾನವಾಗಿತ್ತು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಎರಡನೇ ಹಂತದಲ್ಲಿ ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ? ರಾಯಚೂರು 60.72%, ಬೀದರ್ 63.65%, ಕಲಬುರಗಿ 61.73%, ಚಿಕ್ಕೋಡಿ 74.39%, ಕೊಪ್ಪಳ 69.50%, ವಿಜಯಪುರ 64.71%, ಬಾಗಲಕೋಟೆ 70.47%, ಬೆಳಗಾವಿ 70.84%, ಬಳ್ಳಾರಿ 69.74%, ಹಾವೇರಿ 72.59%, ಶಿವಮೊಗ್ಗ 76.05%, ಉತ್ತರ ಕನ್ನಡ 73.52%, ದಾವಣಗೆರೆ 75.48%, ಧಾರವಾಡ ಕ್ಷೇತ್ರದಲ್ಲಿ ಶೇ. 70.54ರಷ್ಟು ಮತದಾನವಾಗಿದೆ. ಒಟ್ಟಾರೆ ಶೇ.71ರಷ್ಟು ಮತದಾನ ಆಗಿದೆ. ಮೊದಲ ಹಂತಕ್ಕಿಂತ ಎರಡನೇ ಹಂತದಲ್ಲಿ ಹೆಚ್ಚು ವೋಟಿಂಗ್ ಆಗಿದೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಎಷ್ಟು ಮತದಾನ? ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್​​​ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು.

ಇನ್ನು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಪ್ರಭಾವಿ ಮಂತ್ರಿಗಳು, ಮಂತ್ರಿಗಳ ಮಕ್ಕಳು ಸೇರಿ 277 ಅಭ್ಯರ್ಥಿಗಳ ಭವಿಷ್ಯ EVMನಲ್ಲಿ ಭದ್ರವಾಗಿದೆ. ಯಾರು ಗೆಲ್ಲಲಿದ್ದಾರೆ? ಯಾರು ಸೋಲುತ್ತಾರೆ ಎನ್ನುವುದನ್ನು ಜೂನ್ 4 ರಂದು ಗೊತ್ತಾಗಲಿದೆ.

ಇದನ್ನೂ ಓದಿ : ಪ್ರಜ್ವಲ್ ಕೇಸ್​​ನ ಡೀಲ್ ಕಿಂಗ್ ದೇವರಾಜೇಗೌಡ : ಕಾಂಗ್ರೆಸ್ ಮುಖಂಡ ಮಂಜೇಗೌಡ ಆರೋಪ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here