Download Our App

Follow us

Home » ರಾಷ್ಟ್ರೀಯ » ಲೋಕಸಭೆ ಎಲೆಕ್ಷನ್ ಹಿನ್ನೆಲೆ UPSC ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆ..!

ಲೋಕಸಭೆ ಎಲೆಕ್ಷನ್ ಹಿನ್ನೆಲೆ UPSC ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆ..!

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) 2024ರ ನಾಗರಿಕ ಸೇವೆಗಳ ಪ್ರಿಲಿಮ್ಸ್​ ಪರೀಕ್ಷಾ ದಿನಾಂಕವನ್ನು ಮುಂದೂಡಿದೆ. ಈ ಮೊದಲು ಮೇ 26ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆಯನ್ನು ಜೂನ್ 16ಕ್ಕೆ ಮುಂದೂಡಲಾಗಿದೆ.

ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದೂಡುವ ಮಹತ್ವದ ನಿರ್ಧಾರವನ್ನು ಆಯೋಗ ಕೈಗೊಂಡಿದೆ. ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆಗಳಿಗೆ (ಐಪಿಎಸ್) ಅಧಿಕಾರಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕಸೇವಾ ಆಯೋಗ ಫೆ.14ರಂದು ಪ್ರಿಲಿಮ್ಸ್​ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿತ್ತು. ಅಧಿಸೂಚನೆಯ ಪ್ರಕಾರ, ಈ ವರ್ಷ ಸುಮಾರು 1,056 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನಾಗರಿಕ ಸೇವೆಗಳ ಪರೀಕ್ಷೆಯು ಪ್ರಿಲಿಮ್ಸ್, ಮುಖ್ಯ ಪರೀಕ್ಷೆ​ ಮತ್ತು ಸಂದರ್ಶನ​ ಎಂಬ ಮೂರು ಹಂತಗಳಲ್ಲಿ ನಡೆಯುತ್ತದೆ.

UPSC ಪ್ರಿಲಿಮ್ಸ್ ಪರೀಕ್ಷೆ ಹೇಗೆ ನಡೆಯಲಿದೆ? ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯು 200 ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಜಿಎಸ್ 1 100 ಪ್ರಶ್ನೆಗಳನ್ನು ಹೊಂದಿದ್ದರೆ, ಸಿಎಸ್ಎಟಿ 80 ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರತಿ ಪತ್ರಿಕೆಯನ್ನು ಪರಿಹರಿಸಲು ನಿಮಗೆ ಎರಡು ಗಂಟೆಗಳ ಕಾಲಾವಕಾಶ ಸಿಗುತ್ತದೆ. ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕ ನೀಡುವ ಅವಕಾಶವೂ ಇದೆ. ಸಿಎಸ್ಎಟಿಯಲ್ಲಿ ಉತ್ತೀರ್ಣರಾಗಲು 33% ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಅದೇ ಸಮಯದಲ್ಲಿ, ಜಿಎಸ್ 1 ರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ : ಮೈಸೂರು : ಎಲೆಕ್ಟ್ರಿಕ್ ಸ್ಕೂಟರ್​ಗೆ ಹತ್ತಿದ ಬೆಂಕಿಯಿಂದ ಇಡೀ ಮನೆಯೇ ಸುಟ್ಟು ಭಸ್ಮ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here