Download Our App

Follow us

Home » ಮೆಟ್ರೋ » ಅನ್ನಪೂರ್ಣೇಶ್ವರಿ ನಗರ ಠಾಣೆ CCTV ದೃಶ್ಯ ಕೇಳಿದ ವಕೀಲರ ನಿಯೋಗ..!

ಅನ್ನಪೂರ್ಣೇಶ್ವರಿ ನಗರ ಠಾಣೆ CCTV ದೃಶ್ಯ ಕೇಳಿದ ವಕೀಲರ ನಿಯೋಗ..!

ಬೆಂಗಳೂರು : ದರ್ಶನ್ ಕೇಸ್​​ನಲ್ಲಿ​ ಹಳ್ಳ ಹಿಡಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ವಕೀಲರ ನಿಯೋಗ ಅನ್ನಪೂರ್ಣೇಶ್ವರಿ ನಗರ ಠಾಣೆಯ CCTV ದೃಶ್ಯ ಕೇಳಿದೆ. ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರ ನಿಯೋಗ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ನಿಯೋಗ RTI ಮೂಲಕ ಪೊಲೀಸ್​ ಠಾಣೆಯ CCTV ಕ್ಯಾಮೆರಾಗಳ ದೃಶ್ಯವನ್ನ ನೀಡುವಂತೆ ಕೇಳಿದೆ. ವಕೀಲ ಉಮಾಪತಿ, ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ನೇತೃತ್ವದಲ್ಲಿ ದರ್ಶನ್​, ಪವಿತ್ರಾಗೌಡ ಸೇರಿ ಆರೋಪಿಗಳಿರುವ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

ದರ್ಶನ್ ಸೇರಿ ಕೆಲ ಆರೋಪಿಗಳಿಗೆ ಸ್ಪೆಷಲ್​​ ಆತಿಥ್ಯ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆರೋಪ ಬಂದ ಹಿನ್ನೆಲೆಯಲ್ಲಿ ವಕೀಲರ ನಿಯೋಗ ಭೇಟಿ ನೀಡಿದೆ. ವಕೀಲರು ಜೂನ್​​ 10ರ ನಂತರದ ಪೊಲೀಸ್​ ಠಾಣೆಯ CCTV ದೃಶ್ಯ ಕೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಠಾಣೆ ಒಳಗಡೆ ಸಿಸಿಟಿವಿ ಅಳವಿಡಿಸರಬೇಕು, ವಕೀಲರ ನಿಯೋಗ ಒಟ್ಟು ಮೂರು ವಿಚಾರಕ್ಕೆ ಮಾಹಿತಿ ಕೇಳಿದೆ.

ಅಂಶ-1: ಪ್ರಕರಣ ನಡೆದ ದಿನದಿಂದ ಸಿಸಿ ಟಿವಿ‌ ದೃಶ್ಯಾವಳಿ ರಕ್ಷಿಸಿಡಬೇಕು
ಅಂಶ-2: ಪೊಲೀಸ್ ಠಾಣೆಗೆ ಹಾಕಿರುವ ಸೈಡ್​ವಾಲ್​​ ತೆಗೆಯಬೇಕು
ಅಂಶ-3: ಪೊಲೀಸ್ ಠಾಣೆ ಸುತ್ತ ಹಾಕಿರುವ 144 ಸೆಕ್ಷನ್ ತೆಗೆಯಬೇಕು

ನಿಯೋಗ ಈ ಮೂರು ಅಂಶಗಳನ್ನು ಒಳಗೊಂಡ ಮನವಿ ಸಲ್ಲಿಸಿದ್ದು, ಹೈಕೋರ್ಟ್ ಮಟ್ಟದಲ್ಲೂ ಈ ಬಗ್ಗೆ ಹೋರಾಡಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ವಕೀಲ ನರಸಿಂಹಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ‘ಹಿರಣ್ಯ’ ಚಿತ್ರದ ಮೆಲೋಡಿ ಸಾಂಗ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್​ ಸೇರಿದ ಯೋಗೇಶ್ವರ್​​ ಅಭ್ಯರ್ಥಿ ಆಗೋದು ಫಿಕ್ಸ್​.. ಡಿಕೆಶಿ ಚೆಕ್​ಮೇಟ್​ಗೆ ಹೆಚ್​ಡಿಕೆ ರಣತಂತ್ರ ಏನು..?

ಬೆಂಗಳೂರು : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಸಿ.ಪಿ.ಯೋಗೇಶ್ವರ್​ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ

Live Cricket

Add Your Heading Text Here