ಬಿಗ್ಬಾಸ್ ಕನ್ನಡ ಸೀಸನ್ 11 ನಾಳೆ (ಸೆಪ್ಟೆಂಬರ್ 29) ಪ್ರಾರಂಭವಾಗಲಿದೆ. ಇಷ್ಟು ವರ್ಷ ಶೋ ಇನ್ಯಾಗುರೇಷನ್ ದಿನವೇ ಬಿಗ್ ಬಾಸ್ ಸ್ಪರ್ಧಿಗಳನ್ನು ಘೋಷಿಸುವುದು ನೋಡಿದ್ದೇವು. ಆದರೆ ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿಯೇ ಬಿಗ್ಬಾಸ್ ಮನೆಗೆ ಹೋಗಲಿರುವ ಹೆಸರು ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿಯೇ ಅನೌನ್ಸ್ ಆಗುತ್ತಿದೆ.
ಈಗಾಗಲೇ ಮೊದಲ ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದಾರೆ. ನಟಿ ಗೌತಮಿ ಜಾಧವ್ ಬಳಿಕ ಬಿಗ್ಬಾಸ್ ಮನೆಗೆ ಅಚ್ಚರಿ ರೀತಿಯಲ್ಲಿ ವಕೀಲ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ.
ಕಳೆದ ಐದಾರು ವರ್ಷಗಳಿಂದಲೂ ಲಾಯರ್ ಜಗದೀಶ್ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಇದೀಗ ದೊಡ್ಮನೆಯ ಎರಡನೇ ಸ್ಪರ್ಧಿಯಾಗಿ ಇವರು ಹೋಗುತ್ತಿದ್ದಾರೆ. ಸ್ವರ್ಗಕ್ಕೆ ಹೋಗ್ಬೇಕಾ? ಇಲ್ಲ ನರಕಕ್ಕೆ ಹೋಗ್ಬೇಕಾ ಅನ್ನೋದನ್ನ ಜನರು ಇನ್ಮುಂದೆ ವೋಟ್ ಮಾಡಬಹುದು.
ಇದನ್ನೂ ಓದಿ : ಬಿಗ್ಬಾಸ್ನ ಮೊದಲ ಸ್ಪರ್ಧಿ ಇವರೇ ನೋಡಿ – ‘ಗೌತಮಿ ಜಾದವ್’ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?