Download Our App

Follow us

Home » ರಾಜಕೀಯ » ಲಕ್ಷ್ಮೀ ಹೆಬ್ಬಾಳ್ಕರ್‌-ಮುರುಗೇಶ್‌ ನಿರಾಣಿ ವಾಕ್ಸಮರ – ಸಚಿವೆಯ ಬೆಂಬಲಕ್ಕೆ ನಿಂತ ಪಂಚಮಸಾಲಿ ಸ್ವಾಮೀಜಿ..!

ಲಕ್ಷ್ಮೀ ಹೆಬ್ಬಾಳ್ಕರ್‌-ಮುರುಗೇಶ್‌ ನಿರಾಣಿ ವಾಕ್ಸಮರ – ಸಚಿವೆಯ ಬೆಂಬಲಕ್ಕೆ ನಿಂತ ಪಂಚಮಸಾಲಿ ಸ್ವಾಮೀಜಿ..!

ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಸಮರ ತಾರಕಕ್ಕೇರಿದೆ. ಪಂಚಮಸಾಲಿ ಎನ್ನುವ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ಮುರುಗೇಶ್‌ ನಿರಾಣಿ ನಡುವೆ ವಾಕ್ಸಮರ ನಡೆಯುತ್ತಿದೆ. ಈಗ ಈ ವಿಚಾರಕ್ಕೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಧ್ಯಪ್ರವೇಶಿದ್ದು, ಮೀಸಲಾತಿ ಹೋರಾಟಕ್ಕೆ ಸಹಕಾರ ನೀಡಿದವರೆಲ್ಲರೂ ನಮ್ಮ ಸಮಾಜದವರೇ ಎನ್ನುವ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಕ್ಕೆ ನಿಂತಿದ್ದಾರೆ.

ಹೆಬ್ಬಾಳ್ಕರ್-ನಿರಾಣಿ ವಾಕ್ಸಮರದ ಮಧ್ಯೆ ಸ್ವಾಮೀಜಿ ಎಂಟ್ರಿ ಕೊಟ್ಟಿದ್ದು, ನಿರಾಣಿ ಆರೋಪ ಬೆನ್ನಲ್ಲೇ ಕೂಡಲಸಂಗಮ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, “ಮೀಸಲಾತಿ ಹೋರಾಟಕ್ಕೆ ಸಹಕಾರ ನೀಡಿದವರೆಲ್ಲ ನಮ್ಮ ಸಮಾಜದವರೇ. ಯಾರೋ ಒಬ್ಬರು ಏನೋ ಹೇಳಿದ್ರು ಅಂತಾ ತಲೆ ಕೆಡಿಸಿಕೊಳ್ಳೋದು ಬೇಡ. ಹೆಬ್ಬಾಳ್ಕರ್ ಅವಮಾನಿಸುವ ಕೆಲಸ ಮಾಡ್ಬೇಡಿ” ಎಂದು ನಿರಾಣಿಗೆ ತಿರುಗೇಟು ನೀಡಿದ್ದಾರೆ.

ಈ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್​ ನಿರಾಣಿ ಸ್ವಾಮೀಜಿ ಹೇಳಿಕೆಗೆ ಗರಂ ಆಗಿದ್ದಾರೆ. ಒಂದೊಂದು ಸರ್ಕಾರ ಇದ್ದಾಗ ಒಂದೊಂದು ರೀತಿ ವರ್ತಿಸಬೇಡಿ. ಈಗ್ಯಾಕೆ ಸರ್ಕಾರದ ವಿರುದ್ಧ ಹೋರಾಟ ಮಾಡದೇ ನಿದ್ರೆಯಲ್ಲಿದ್ದೀರ? ಒಂದು ಪಕ್ಷದ ಪರ ಪ್ರಚಾರ ಮಾಡೋದನ್ನು ಬಿಡಿ ಎಂದು ಟೀಕೆ ಮಾಡಿದ್ದಾರೆ.

ಹಿನ್ನೆಲೆ : ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮೃಣಾಲ್‌ ಗೆಲ್ಲಿಸಲು ಪಂಚಮಸಾಲಿ ಕಾರ್ಡ್ ಪ್ಲೇ ಮಾಡಿದ್ದರು. ನನ್ನ ಮೈಯಲ್ಲಿ ಚೆನ್ನಮ್ಮನ ರಕ್ತ, ಪುತ್ರನ ಮೈಯಲ್ಲಿ ಪಂಚಮಸಾಲಿ ‌ರಕ್ತವಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ನಿರಾಣಿ, ಹೆಬ್ಬಾಳ್ಕರ್​​ ಪಂಚಮಸಾಲಿಯಲ್ಲ, ಬಣಜಿಗ ಸಮಾಜದವರು ಎಂದಿದ್ದರು.

ಇದನ್ನೂ ಓದಿ : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ – ನಾಲ್ವರು ಸ್ಥಳದಲ್ಲೇ ಸಾ*ವು..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here