Download Our App

Follow us

Home » ಸಿನಿಮಾ » ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ‘ಕುಲದಲ್ಲಿ ಕೀಳ್ಯಾವುದೊ’ ಚಿತ್ರಕ್ಕೆ ಭರ್ಜರಿ ಕ್ಲೈಮ್ಯಾಕ್ಸ್..!

ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ‘ಕುಲದಲ್ಲಿ ಕೀಳ್ಯಾವುದೊ’ ಚಿತ್ರಕ್ಕೆ ಭರ್ಜರಿ ಕ್ಲೈಮ್ಯಾಕ್ಸ್..!

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ರಾಮನಗರದ ಸಮೀಪ ಅದ್ದೂರಿಯಾಗಿ ನೆರವೇರಿತು. ವಿನೋದ್ ಮಾಸ್ಟರ್ ಸಾಹಸ ನಿರ್ದೇಶನದಲ್ಲಿ ನಾಯಕ ಮಡೆನೂರ್ ಮನು, ನಾಯಕಿ ಮೌನ‌ ಗುಡ್ಡಮನೆ, ಶರತ್ ಲೋಹಿತಾಶ್ವ, ಕರಿ ಸುಬ್ಬು, ಡ್ರ್ಯಾಗನ್ ಮಂಜು, ಸೀನ ಮುಂತಾದವರು ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಬಿಡುವಿನ ವೇಳೆ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾಹಿತಿ ನೀಡಿದರು.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಾಮನಾರಾಯಣ್, ಹೆಸರೆ ಹೇಳುವಂತೆ ‘ಕುಲದಲ್ಲಿ ಕೀಳ್ಯಾವುದೊ’ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಅವರ ಮಾರ್ಗದರ್ಶನದಲ್ಲಿ ಸಂತೋಷ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ ವಿನೋದ್ ಮಾಸ್ಟರ್ ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮಡೆನೂರ್ ಮನು, ಶರತ್ ಲೋಹಿತಾಶ್ವ, ಡ್ರ್ಯಾಗನ್ ಮಂಜು, ಕರಿಸುಬ್ಬು,‌ ಮೌನ ಗುಡ್ಡೆಮನೆ, ಸ್ಥಳೀಯ ಪ್ರತಿಭೆ ಸೀನ ಮುಂತಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸೋನಾಲ್ ಮೊಂತೆರೊ ಅವರು ಚಿತ್ರದ ವಿಶೇಷಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಇದು ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ‌ ಬಾಕಿಯಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂದರು.

ನಿರ್ಮಾಪಕ ಸಂತೋಷ್ ಮಾತನಾಡಿ, ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಯೋಗರಾಜ್ ಭಟ್ ನಮ್ಮ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಮಡೆನೂರ್ ಮನು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅಂದುಕೊಂಡಂತೆ ಆದರೆ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.

ಚಿತ್ರದ ತಮ್ಮ ಅಭಿಪ್ರಾಯ ತಿಳಿಸಿದ ಮಡೆನೂರ್ ಮನು, ಯೋಗರಾಜ್ ಭಟ್ ಅವರ ಮಾರ್ಗದರ್ಶನದಲ್ಲಿ, ಸಂತೋಷ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ , ರಾಮನಾರಾಯಣ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟಿಸಲು ತುಂಬಾ ಸಂತೋಷವಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಶರತ್ ಲೋಹಿತಾಶ್ವ, ತಬಲ ನಾಣಿ ಮುಂತಾದ ಹಿರಿಯ ಕಲಾವಿದರ ಜೊತೆ ನಟಿಸಿ‌ ಸಾಕಷ್ಟು ಕಲಿತೆದ್ದೇನೆ ಎಂದು  ತಿಳಿಸಿದರು. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಈ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ ಎಂದು ಮೌನ ಗುಡ್ಡಮನೆ ಹೇಳಿದರು.ಶರತ್ ಲೋಹಿತಾಶ್ವ, ಕರಿಸುಬ್ಬು, ಡ್ರ್ಯಾಗನ್‌ ಮಂಜು, ಸೀನ,‌ ಸಾಹಸ ನಿರ್ದೇಶಕ ವಿನೋದ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಮನು ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಮಡೆನೂರ್ ಮನು, ಮೌನ ಗುಡ್ಡೆಮನೆ, ಯೋಗರಾಜ್ ಭಟ್, ಹರೀಶ್ ರಾಜ್, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣ – ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ಧರಾಮಯ್ಯ ಸೂಚನೆ..!

Leave a Comment

DG Ad

RELATED LATEST NEWS

Top Headlines

ಬಸ್​ನಲ್ಲಿ ಸಿಕ್ತು ಚಿನ್ನಾಭರಣದ ಬ್ಯಾಗ್ – ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವಿಜಯನಗರ ನಿವಾಸಿ ರಾಘವೇಂದ್ರ

ವಿಜಯನಗರ : ಬಸ್​ನಲ್ಲಿ ಸಿಕ್ಕ ಲಕ್ಷ-ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿ ವಿಜಯನಗರ ಜಿಲ್ಲೆಯ ರಾಘವೇಂದ್ರ ಎಂಬುವವರು ಪ್ರಾಮಾಣಿಕತೆ ಮೆರೆದಿದ್ದಾರೆ. ಹೊಸಪೇಟೆ ತಾಲೂಕಿನ ಮಲಪನಗುಡಿಯ ರಾಘವೇಂದ್ರ ಅವರು

Live Cricket

Add Your Heading Text Here