ಬೆಂಗಳೂರು : KSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿ ಮೂಲಕ ತಲೆಯನ್ನು ಹೊರ ಹಾಕಿದಾಗ ಅವರ ತಲೆ ಕಿಟಕಿಗೆ ಸಿಲುಕಿ ಪರದಾಡಿದ್ದಾರೆ. ಬಸ್ ಪ್ರಯಾಣದ ವೇಳೆ ಉಗಳುವ ಭರದಲ್ಲಿ ಕಿಟಕಿಯ ಸಣ್ಣ ಸಂದಿಯಿಂದಲೇ ತಲೆ ಹೊರ ಹಾಕಿದಾಗ ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿದೆ.
ಹಾಗೆ ಹೊರ ಹಾಕಿದ ತಲೆ ವಾಪಸ್ ಒಳಗೆ ಬಾರದೇ ಅಲ್ಲೆ ಲಾಕ್ ಆಗಿಬಿಟ್ಟಿದೆ. ಕಿಟಕಿಯಲ್ಲಿ ಸಣ್ಣ ಜಾಗವಿದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು. ಈ ವೇಳೆ ಮಹಿಳೆಯ ತಲೆ ಗಮನಿಸಿದ KSRTC ಬಸ್ನ ಚಾಲಕ, ನಿರ್ವಾಹಕ ಲಾಕ್ ಆಗಿದ್ದ ಮಹಿಳೆಯ ಪರದಾಟ ಕಂಡು ಬಸ್ ನಿಲ್ಲಿಸಿದ್ದಾರೆ.
https://www.facebook.com/reel/2604327066396046
ಬಳಿಕ ಅತ್ಯಂತ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದಾರೆ.
ಇದನ್ನೂ ಓದಿ : ವೆಬ್ ಸರಣಿಯಾಗಿ ಮೂಡಿಬರಲಿದೆ ಮದರ್ ತೆರೇಸಾ ಜೀವನ ಚರಿತ್ರೆ..!