Download Our App

Follow us

Home » ಜಿಲ್ಲೆ » ಭರ್ಜರಿ ಮಳೆಯಿಂದ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಕೆಆರ್‌ಎಸ್ ನೀರಿನ ಮಟ್ಟ – ರೈತರ ಮೊಗದಲ್ಲಿ ಸಂತಸ..!

ಭರ್ಜರಿ ಮಳೆಯಿಂದ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಕೆಆರ್‌ಎಸ್ ನೀರಿನ ಮಟ್ಟ – ರೈತರ ಮೊಗದಲ್ಲಿ ಸಂತಸ..!

ಮಂಡ್ಯ : ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ವರುಣನ ಆರ್ಭಟ ಚುರುಕುಗೊಂಡಿದೆ. ಪರಿಣಾಮ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಸಹ ಏರಿಕೆಯಾಗಿದೆ. ಭರ್ಜರಿ ಮಳೆಯಿಂದ ಕೆ.ಆರ್​.ಎಸ್‌ ಜಲಾಶಯಕ್ಕೆ ಬರುವ ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗಿದ್ದು, ಒಳ ಹರಿವು 44.617 ಕ್ಯೂಸೆಕ್​ ಹೆಚ್ಚಾಗಿದೆ. ಒಂದೇ ರಾತ್ರಿಯಲ್ಲಿ 3 ಅಡಿ ನೀರು ಶೇಖರಣೆಯಾಗಿದೆ. ಈ ಮುಲಕ KRS ಡ್ಯಾಂನ ನೀರಿನ ಮಟ್ಟ 116 ಅಡಿ ದಾಟಿದೆ. ಇದೇ ರೀತಿ ಒಳ ಹರಿವಿನ ಪ್ರಮಾಣ ಮುಂದುವರೆದರೆ ಒಂದೇ ವಾರದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ. ಪುನರ್ವಸು ಮಳೆಗೆ ಈ ಬಾರೀ ಬಹುತೇಕ ಡ್ಯಾಂ ತುಂಬುವ ಸಾಧ್ಯತೆಯಿದೆ.

KRS ಡ್ಯಾಂನ ಇಂದಿನ ನೀರಿನ‌ ಮಟ್ಟ :

  • ಗರಿಷ್ಠ ಮಟ್ಟ 124.80 ಅಡಿ
  • ಇಂದಿನ ಮಟ್ಟ 116.60 ಅಡಿ
  • ಗರಿಷ್ಠ ಸಾಂದ್ರತೆ 49.453 ಟಿಎಂಸಿ
  • ಇಂದಿನ ಸಾಂದ್ರತೆ 38.900 ಟಿಎಂಸಿ
  • ಒಳ ಹರಿವು 44,617 ಕ್ಯೂಸೆಕ್
  • ಹೊರ ಹರಿವು 2,566 ಕ್ಯೂಸೆಕ್

ಇದನ್ನೂ ಓದಿ : ಹಾವೇರಿಯಲ್ಲಿ ಹೃದಯ ವಿದ್ರಾವಕ ಘಟನೆ – ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು..!

 

Leave a Comment

DG Ad

RELATED LATEST NEWS

Top Headlines

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ K.L ರಾಹುಲ್-ಅಥಿಯಾ ದಂಪತಿ..!

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಖುದ್ದು ಆಥಿಯಾ ಶೆಟ್ಟಿ ತಮ್ಮ ಇನ್​​ಇಸ್ಟಾಗ್ರಾಮ್​ನಲ್ಲಿ

Live Cricket

Add Your Heading Text Here