Download Our App

Follow us

Home » ರಾಜ್ಯ » ಭರ್ತಿಯತ್ತ KRS ಜಲಾಶಯ – ಕಾವೇರಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ..!

ಭರ್ತಿಯತ್ತ KRS ಜಲಾಶಯ – ಕಾವೇರಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ..!

ಮಂಡ್ಯ : ರಾಜ್ಯದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಲವು ಜಲಾಶಯಗಳು ಈಗಾಗಲೇ ಭರ್ತಿಯಾಗುವ ಹಂತ ತಲುಪಿವೆ. ಕೆಆರ್‌ಎಸ್‌ ಭರ್ತಿಯಾಗಲು ಕ್ಷಣಗಣನೆ ಶುರುವಾಗುತ್ತಿದ್ದಂತೆ, ನದಿಗಳಿಗೆ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್​​​ಎಸ್​​ ಡ್ಯಾಂನ ಒಳ ಹರಿವು  ಹೆಚ್ಚಾದಂತೆ ಹೊರ ಹರಿವಿನಲ್ಲೂ ಹೆಚ್ಚಳವಾಗಿದೆ. ಸದ್ಯ ಡ್ಯಾಂ ಒಳ ಹರಿವು 69,617 ಕ್ಯೂಸೆಕ್​​​ಗೆ ಏರಿಕೆಯಾಗಿದೆ. ನಿನ್ನೆ KRS ಡ್ಯಾಂ ನೀರಿನ ಮಟ್ಟ 119 ಅಡಿಯಿತ್ತು. ಭಾರೀ ಪ್ರಮಾಣದಲ್ಲಿ ನೀರಿನ ಒಳ ಹರಿವು 51,375 ಕ್ಯೂಸೆಕ್​​ಗೆ ತಲುಪಿತ್ತು. ​ಇದೀಗ ಡ್ಯಾಂ 122.70 ಅಡಿ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಿಂದ ಸದ್ಯ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.

ಈಗಾಗಲೇ ಪ್ರವಾಹ ಮುನ್ನೆಚ್ಚರಿಕೆ ಸೂಚನೆ ನೀಡಿರುವ ಅಧಿಕಾರಿಗಳು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಜನ ಸಂಚಾರಕ್ಕೆ ನಿರ್ಬಂಧ ಏರಿದ್ದಾರೆ. ಇದರೊಂದಿಗೆ KRS ಡ್ಯಾಂನ ನೀರಿನ ಮಟ್ಟ ಏರಿಕೆಯಿಂದ ರಂಗನತಿಟ್ಟು ಪಕ್ಷಿಧಾ‌ಮ, ಸಂಗಮ ಘೋಸಾಯ್ ಘಾಟ್​​ ಜಲಾವೃತವಾಗುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.

KRS ಡ್ಯಾಂನ ಇಂದಿನ ನೀರಿನ‌ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ.
  • ಇಂದಿನ ಮಟ್ಟ – 122.70 ಅಡಿ.
  • ಗರಿಷ್ಠ ಸಾಂದ್ರತೆ – 49.453 ಟಿಎಂಸಿ.
  • ಇಂದಿನ ಸಾಂದ್ರತೆ – 46.567 ಟಿಎಂಸಿ
  • ಒಳ ಹರಿವು – 69,617 ಕ್ಯೂಸೆಕ್
  • ಹೊರ ಹರಿವು – 27,184 ಕ್ಯೂಸೆಕ್

ಇದನ್ನೂ ಓದಿ : ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​ – ಸಿನಿಮಾ ಆಗಸ್ಟ್​​​​​ನಲ್ಲಿ ತೆರೆಗೆ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here