Download Our App

Follow us

Home » ಸಿನಿಮಾ » ಕೃತಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಮೇಲೆ ಕ್ರಶ್ ಆಯ್ತಾ? ಶೆಟ್ರ ಸ್ಟೈಲ್ ಆಫ್ ಆ್ಯಕ್ಟಿಂಗ್ ಇಷ್ಟ ಎಂದ ನಟಿ..!

ಕೃತಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಮೇಲೆ ಕ್ರಶ್ ಆಯ್ತಾ? ಶೆಟ್ರ ಸ್ಟೈಲ್ ಆಫ್ ಆ್ಯಕ್ಟಿಂಗ್ ಇಷ್ಟ ಎಂದ ನಟಿ..!

ಸಿಂಪಲ್ ಸ್ಟಾರ್ ಅಂತಲೇ ಖ್ಯಾತಿ ಪಡೆದಿರುವ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಮತ್ತು ಯುವ ನಿರ್ದೇಶಕ. ಉಳಿದವರು ಕಂಡಂತೆ, ಕಿರಿಕ್‌ ಪಾರ್ಟಿ, 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಹಾಗೂ ಹಲವು ಸಿನಿಮಾದ ಮೂಲಕ ಧೂಳೆಬ್ಬಿಸಿರುವ ರಕ್ಷಿತ್ ಶೆಟ್ರರ ಆ್ಯಕ್ಟಿಂಗ್​​ ಅನ್ನು ಎಲ್ಲರೂ ನೋಡಿ ಇಷ್ಟಪ್ತಾರೆ. ಅದೇ ರೀತಿ ರಕ್ಷಿತ್ ಮೆಚ್ಚಿಕೊಳ್ಳುವ ನಟಿ ಮಣಿಯರು ಇಂಡಸ್ಟ್ರಿಯಲ್ಲಿ ಇದ್ದಾರೆ ಬಿಡಿ. ಹಾಗೆ ಇದೀಗ ಕರ್ನಾಟಕದ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಈಗ ರಕ್ಷಿತ್ ಶೆಟ್ರ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಹೌದು, ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​​ಗೆ ಎಂಟ್ರಿ ಕೊಟ್ಟ ಹಾಟ್​​​​ ಬ್ಯೂಟಿ ಕೃತಿ ಶೆಟ್ಟಿ, ತಮ್ಮ ಬೋಲ್ಡ್​​ ನಟನೆಯಿಂದಲೇ ಎಲ್ಲರ ಕಣ್ಣುಗಳನ್ನು ತಮ್ಮತ್ತ ತಿರುಗಿಸಿದವರು. ಸೌಂದರ್ಯ ಹಾಗೂ ಮುಗ್ಧ ನೋಟದಿಂದ ಎಲ್ಲರ ಮನಗಿದ್ದಿರುವ ಕೃತಿ ಶೆಟ್ಟಿ ಕನ್ನಡ ಸಿನಿಮಾ ಮಾಡಿಲ್ಲವಾದ್ರೂ ಕನ್ನಡದ ಕಲಾವಿದರ ಅಭಿನಯವನ್ನ ಗಮನಿಸುತ್ತಲೇ ಇರ್ತಾರೆ.

ರಕ್ಷಿತ್ ಶೆಟ್ಟಿ ಈ ವಿಚಾರದಲ್ಲಿ ಫಸ್ಟ್ ಪ್ಲೇಸ್ ಅಲ್ಲಿಯೇ ಇದ್ದಾರೆ ಅನಿಸುತ್ತದೆ. ಕೃತಿ ಶೆಟ್ಟಿ ಈಗಾಗಲೇ ಈ ವಿಚಾರವನ್ನು ಕೂಡ ಹೇಳಿಕೊಂಡಿದ್ದಾರೆ. ಇದೀಗ ಸಿಂಪಲ್ ಸ್ಟಾರ್ ಬಗ್ಗೆ ಕೃತಿ ಶೆಟ್ಟಿ ಹೇಳಿರುವ ಮಾತು ಎಲ್ಲೆಡೆ ವೈರಲ್ ಆಗಿದೆ.

ರಕ್ಷಿತ್ ಶೆಟ್ಟಿಯ ಸ್ಟೈಲ್ ಆಫ್ ವರ್ಕಿಂಗ್ ಮೆಚ್ಚಿಕೊಂಡಿರುವ ಕೃತಿ ಶೆಟ್ಟಿ ಅವರು, ರಕ್ಷಿತ್ ಶೆಟ್ರ ಅಭಿನಯವನ್ನ ತುಂಬಾನೆ ಚೆನ್ನಾಗಿರುತ್ತದೆ. ಅದನ್ನ ನಾವು ಗಮನಿಸುತ್ತಲೇ ಇರುತ್ತೇನೆ. ರಕ್ಷಿತ್ ಶೆಟ್ರ ಅಭಿನಯ ನನಗೆ ತುಂಬಾನೇ ಇಷ್ಟ ಅಂತಲೂ ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಒಂದು ಮಾತು ಎಲ್ಲೆಡೆ ವೈರಲ್ ಆಗಿದೆ. ಒಂದು ಕಡೆಗೆ ರಕ್ಷಿತ್ ಶೆಟ್ಟಿ ಫೋಟೋ ಮತ್ತೊಂದು ಕಡೆಗೆ ಕೃತಿ ಶೆಟ್ಟಿ ಫೋಟೋಗಳು ಈಗ ಗಮನ ಸೆಳೆಯುತ್ತಿವೆ.

ರಕ್ಷಿತ್ ಶೆಟ್ಟಿ ಸಿನಿಮಾ ಜೀವನದಲ್ಲಿ ದೊಡ್ಡ ಸಿನಿಮಾಗಳು ಬಂದಿವೆ. ಹೊಸ ರೀತಿಯ ಚಿತ್ರಗಳು ಸಾಲು ಸಾಲಾಗಿಯೇ ರೆಡಿ ಆಗುತ್ತಿವೆ. ನಿರ್ಮಾಣದಲ್ಲಿ ಒಳ್ಳೆ ಕಥೆಗೆ ರಕ್ಷಿತ್ ದುಡ್ಡು ಕೂಡ ಹಾಕಿದ್ದಾರೆ. ಅದರ ಮಧ್ಯೆ ಕೃತಿ ಶೆಟ್ಟಿ ನನಗೆ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಇಷ್ಟ ಅಂತ ಹೇಳಿರೋದು ಹೆಚ್ಚು ವೈರಲ್ ಆಗುತ್ತಿದೆ. ಈ ಮೂಲಕ ರಕ್ಷಿತ್ ಶೆಟ್ಟಿ ಮತ್ತು ಕೃತಿ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ? ಇನ್ನುಳಿದಂತೆ ಶೆಟ್ರ ಮೇಲೆ ಕೃತಿ ಶೆಟ್ಟಿಗೆ ಕ್ರಶ್ ಆಯಿತೇ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ನನಗೆ ಮಗು ಮಾಡಿಕೊಳ್ಳೋ ಆಸೆಯಿದೆ – ತಮ್ಮ ಕನಸನ್ನ ಬಿಚ್ಚಿಟ್ಟ ತನಿಷಾ ಕುಪ್ಪಂಡ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್‌‌ – BMTC ಬಸ್ಸನ್ನೇ ಅಡ್ಡಗಟ್ಟಿ ಹುಚ್ಚಾಟ ಮೆರೆದ ಭೂಪ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾರು, ಬೈಕ್ ಆಯ್ತು.. ಇದೀಗ BMTC ಬಸ್ಸನ್ನೇ ಅಡ್ಡಗಟ್ಟಿ ಬೈಕ್​

Live Cricket

Add Your Heading Text Here