ಮನು ಸ್ವರಾಜ್ ನಿರ್ದೇಶಿಸಲಿರುವ “ಪಡಕ್ಕಳಂ” ಎಂಬ ಮಲಯಾಳಂ ಹಾಸ್ಯಭರಿತ ಚಿತ್ರಕ್ಕೆ ಮುಹೂರ್ತದ ಮೂಲಕ ಚಾಲನೆ ಸಿಕ್ಕಿದೆ. ಈ ಸಿನಿಮಾ ಕೆ.ಆರ್.ಜಿ. ಸ್ಟೂಡಿಯೋಸ್ ಮತ್ತು ಫ್ರೈಡೇ ಫಿಲಂ ಹೌಸ್ನ ಪ್ರಥಮ ಸಹಯೋಗ ಮತ್ತು ಕೆ.ಆರ್.ಜಿ. ಬ್ಯಾನರ್‌ನ ಮೊದಲ ಮಲಯಾಳಂ ಚಿತ್ರವಾಗಿದೆ.
ಚಿತ್ರ ತಂಡ ಇಂದು ಕೊಚ್ಚಿಯಲ್ಲಿ ಮುಹೂರ್ತದ ಮೂಲಕ ಹಾಗೂ ಒಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಅಧಿಕೃತವಾಗಿ ಆರಂಭಿಸಿದೆ. “ಪಡಕ್ಕಳಂ” ಒಂದು ಹಾಸ್ಯಭರಿತ ಫ್ಯಾಂಟಸಿಯ ಚಿತ್ರವಾಗಿದೆ.
ಈ ಚಿತ್ರ ಮನು ಸ್ವರಾಜ್ ಅವರ ಮೊದಲ ಪ್ರಯತ್ನವಾಗಿದ್ದು, ಇದನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.
ಇದನ್ನೂ ಓದಿ : ಅಪೆಕ್ಸ್ ಬ್ಯಾಂಕ್ನಲ್ಲಿ ಬರೋಬ್ಬರಿ 2 ಸಾವಿರ ಕೋಟಿ ಹಗರಣ – ಸಚಿವ ಕೆ.ಎನ್. ರಾಜಣ್ಣಗೆ ಢವಢವ..!
Post Views: 46