Download Our App

Follow us

Home » ಸಿನಿಮಾ » ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಸೇರಿ ಹಲವರ ಕಂಠಸಿರಿಯಲ್ಲಿ “ಕೊರಗಜ್ಜ” ಸಾಂಗ್ಸ್​!

ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಸೇರಿ ಹಲವರ ಕಂಠಸಿರಿಯಲ್ಲಿ “ಕೊರಗಜ್ಜ” ಸಾಂಗ್ಸ್​!

ಬೆಂಗಳೂರು : ಭಾರೀ ಕುತೂಹಲ ಮೂಡಿಸಿರುವ ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರಕ್ಕೆ ದೇಶದ ಘಟಾನುಘಟಿ ಗಾಯಕರಾದ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್, ಸೋನು ನಿಗಮ್, ಶಾನ್​​ ಸೇರಿ ಹಲವರು ತಮ್ಮ ಕಂಠಸಿರಿ ಮೂಲಕ ಅದ್ಭುತ ಹಾಡುಗಳನ್ನು ಹಾಡಿದ್ದಾರೆ.

ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ “ಕೊರಗಜ್ಜ” ಸಿನಿಮಾಗೆ ಕಳೆದ ವಾರವಷ್ಟೇ ಗಾಯಕಿ ಶ್ರೇಯಾ ಘೋಷಾಲ್ ಅವರು ಎರಡು ಹಾಡುಗಳ ರೆಕಾರ್ಡಿಂಗ್ ಮುಗಿಸಿದ್ದಾರೆ. ಚಿತ್ರದ ಹಾಡಿನ ಸಾಹಿತ್ಯಕ್ಕೆ ಮಾರು ಹೋಗಿ, ಈ ಹಿಂದೆ ಸುಧೀರ್ ರಚಿಸಿದ್ದ ಶ್ರೇಯಾ ಘೋಷಾಲ್ ಕಂಠಸಿರಿಯ ಸೂಪರ್ ಹಿಟ್ “ಎಲ್ಲೋಜಿನುಗಿರುವ ನೀರು..” ಹಾಡನ್ನು ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಅವರ ಸಮ್ಮುಖದಲ್ಲಿ ನಿರ್ದೇಶಕ ಸುಧೀರ್ ಮತ್ತು ಶ್ರೇಯಾ ಅವರು ಹಾಡಿ, ಸಿಹಿ ನೆನಪನ್ನು ಮೆಲುಕು ಹಾಕಿ, ಕನ್ನಡ ಹಾಡುಗಳ ಸೊಬಗನ್ನು ಸಂಭ್ರಮಿಸಿದರು.

ಕನ್ನಡ ಚಿತ್ರಗಳ ಸಾಹಿತ್ಯ ಉತ್ಕ್ರಷ್ಟ ಮಟ್ಟದಲಿರುತ್ತದೆ. ಹಾಗಾಗಿಯೇ ಕನ್ನಡ ಚಿತ್ರಗಳ ಹಾಡುಗಳಿಗೆ ನಾನು ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಸಿಂಗರ್ ಶ್ರೇಯಾ ಘೋಷಾಲ್ ಹೇಳಿದರು. “ಕೊರಗಜ್ಜ” ಸಿನಿಮಾದ “ಗಾಳಿಗಂಧ” ಹಾಡನ್ನು ಶ್ರೇಯಾ ಘೋಷಲ್​ ಅವರ ಜೊತೆ ಅದರ ‘ಮೇಲ್ ವರ್ಷನ್’ನನ್ನು ಸೋನು ನಿಗಮ್ ಮತ್ತು ಶಾನ್ ಹಾಡಲಿದ್ದಾರೆ. ಉಳಿದಂತೆ “ಪೋರ್ಕುಳಿ ಪೆರತದಲಿ” ಎನ್ನುವ ಹಾಡನ್ನು ಸುನಿಧಿ ಚೌಹಾನ್ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಹಾಡಿದ್ದಾರೆ.

“ವಾಜೀ ಸವಾರಿಯಲಿ” ಮತ್ತು “ಜಾವಂದ ಕುಲದ.” ಎನ್ನುವ ಹಾಡುಗಳನ್ನು ಜಾವೇದ್ ಅಲಿ ಹಾಡಿದ್ದಾರೆ. “ತೌಳವ ದೇಶೇ..” ಎನ್ನುವ 7 ನಿಮಿಷಗಳ ವಿಶೇಷವಾದ ಸಂಸ್ಕೃತ ಹಾಡು ಶಂಕರ್ ಮಹಾದೇವನ್ ಧ್ವನಿಯಲ್ಲಿ ಮೂಡಿ ಬರಲಿದೆ. ಮತ್ತೊಂದು ವಿಶಿಷ್ಟ ಹಾಡು “ತೆಲ್ಲಂಟಿ..ತೆಲ್ಲಂಟಿ..” ಹಾಡನ್ನು “ಪಿಕೆ” & “ಪದ್ಮಾವತ್” ಚಿತ್ರಗಳ ಉದಯೋನ್ಮುಖ ಹಿನ್ನೆಲೆ ಗಾಯಕ ಸ್ವರೂಪ್ ಖಾನ್ ಜೊತೆ ಮೈಕಲ್ ಜಾಕ್ಸನ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದ ದೇಶದ ಪ್ರಪ್ರಥಮ ಪಾಪ್ ಗಾಯಕಿ ಶರೋನ್ ಪ್ರಭಾಕರ್ ಹಾಡಿದ್ದಾರೆ.

ಇದರ ಜೊತೆ ಕನ್ನಡದ ಪ್ರತಿಭೆಗಳಾದ ರಮೇಶ್ ಚಂದ್ರ , ಪ್ರತಿಮಾ ಭಟ್ ಹಾಗೂ ಮಲಯಾಳಂ ಮತ್ತು ತಮಿಳಿನ ಖ್ಯಾತ ಗಾಯಕರಾದ ಸನ್ನಿಧಾನಂದನ್, ಅನಿಲ ರಾಜಿವ, ಕಾಂಜನ ಶ್ರೀರಾಂ, ವಿಜೇಶ್ ಗೋಪಾಲ್, ಸೌಮ್ಯ ರಾಮಕೃಷ್ಣನ್ ಕೂಡಾ ಹಾಡುಗಳನ್ನು ಹಾಡಿದ್ದಾರೆ. ದಕ್ಷಿಣದ ಖ್ಯಾತ ಗೋಪಿ ಸುಂದರ್ ಅವರ ಕಂಪೋಸಿಂಗ್​ಗೆ ಸುಧೀರ್ ಅತ್ತಾವರ್ ಎಲ್ಲಾ ಹಾಡುಗಳನ್ನು ರಚಿಸಿಸಿದ್ದಾರೆ. ಚಿತ್ರದ ಆಡಿಯೋ ಲಾಂಚ್, ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯನ್ನು ವಿಭಿನ್ನ ರೀತಿಯಲ್ಲಿ ಮುಂದಿನ ತಿಂಗಳು ಅನಾವರಣಗೊಳಿಸಲು “ಕೊರಗಜ್ಜ” ಚಿತ್ರತಂಡ ಯೋಜನೆ ರೂಪಿಸುತ್ತಿದೆ.

ಇದನ್ನೂ ಓದಿ : ಆನೇಕಲ್ : ಹೆತ್ತ ತಾಯಿಯನ್ನೇ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಮಗ..!

Leave a Comment

DG Ad

RELATED LATEST NEWS

Top Headlines

ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ,

Live Cricket

Add Your Heading Text Here