ಕೋಲಾರ : ಚಿನ್ನದ ನಾಡು ಕೋಲಾರದ ಕ್ಲಾಕ್ ಟವರ್ ಮೂಲಕ RSS ಶೋಭಾ ಯಾತ್ರೆಯ ಪಥ ಸಂಚಲನ ನಡೆಸಿದೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕೋಲಾರದ ಕ್ಲಾಕ್ ಟವರ್ ಮೂಲಕ ಆರ್ಎಸ್ಎಸ್ ಶೋಭಾಯತ್ರೆಯ ಪಥಸಂಚಲನ ನಡೆಸಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬರೋಬ್ಬರಿ 15 ಕಿಲೋ ಮೀಟರ್ ದೀರ್ಘ ಪಥ ಸಂಚಲನ ನಡೆಯಿತು.
ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಿಂದ ಜೂನಿಯರ್ ಕಾಲೇಜು ಆವರಣ ತನಕ ಪಥಸಂಚಲನ ನಡೆದಿದ್ದು ಕ್ಲಾಕ್ ಟವರ್ ಮೂಲಕ ಜೂನಿಯರ್ ಕಾಲೇಜು ಆವರಣ ತಲುಪಿತು. ಸೂಕ್ಷ್ಮ ಪ್ರದೇಶವಾಗಿರುವ ಕ್ಲಾಕ್ ಟವರ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಿ ಪೊಲೀಸರು ಫುಲ್ ಅಲರ್ಟ್ ಆಗಿದ್ದರು.
ಇನ್ನು ಆರ್ಎಸ್ಎಸ್ ಪಥ ಸಂಚಲನಕ್ಕೆ ಕ್ಲಾಕ್ ಟವರ್ ಮೂಲಕ ತೆರಳಲು ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ RSS ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನಿಂದ ಅನುಮತಿ ತಂದು ಕ್ಲಾಕ್ ಟವರ್ ಮೂಲಕ ಪಥ ಸಂಚಲನ ನಡೆಸಲಾಯ್ತು.
ಕ್ಲಾಕ್ ಟವರ್ ಸಂಪರ್ಕಿಸುವ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದರು. ಕೋಲಾರ ಎಸ್ಪಿ ನಿಖಿಲ್ ನೇತೃತ್ವದಲ್ಲಿ ಹೆಜ್ಜೆ ಹೆಜ್ಜೆಗೂ1 ಸಾವಿರಕ್ಕೂ ಹೆಚ್ಚು ಪೊಲೀಸರು ಕಣ್ಗಾವಲು ಇಟ್ಟಿದ್ದರು. ಆರ್ಎಸ್ಎಸ್ ಪಥ ಸಂಚಲನಕ್ಕೆ ಅಗತ್ಯ ಸಹಕಾರ ನೀಡುವಂತೆ ಮುಸ್ಲಿಂ ಮುಖಂಡರಿಗೆ ಪೊಲೀಸರು ಮನವಿ ಮಾಡಿದರು.
ಇದನ್ನೂ ಓದಿ : ಕೆರೆಗೋಡಿನಲ್ಲಿ ನೂತನ ಪೊಲೀಸ್ ಕಚೇರಿ ಉದ್ಘಾಟಿಸಿದ ಸಚಿವ ಚಲುವರಾಯಸ್ವಾಮಿ – MLA ರವಿಕುಮಾರ್ ಗೌಡ ಸೇರಿ ಹಲವರು ಭಾಗಿ!