ಬೆಂಗಳೂರು : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ (KMF) ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಅಧಿಕೃತ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಈ ಮೂಲಕ ದೆಹಲಿಯ ಅಮೂಲ್, ಮದರ್ ಡೈರಿ ಮಾರುಕಟ್ಟೆಗೆ KMF ಲಗ್ಗೆ ಇಟ್ಟಿದೆ.
ಹಸುವಿನ ಹಾಲು ಪೂರೈಕೆಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಈ ಬಗ್ಗೆ ಮಾತುಕತೆ ನಡೆದಿತ್ತು. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಕೆ.ಎಂ.ಎಫ್ ಐದು ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.
29 ವರ್ಷಗಳ ಹಿಂದೆ KMF ದೆಹಲಿಗೆ ಹಸುವಿನ ಹಾಲು ಪೂರೈಸುತ್ತಿತ್ತು. ಕಾರಣಾಂತರಗಳಿಂದಾಗಿ ಹಾಲು ಪೂರೈಕೆ ಸ್ಥಗಿತವಾಗಿತ್ತು. ಈಗಾಗಲೇ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಕೇರಳಕ್ಕೂ ಹಾಲು ಪೂರೈಕೆ ಮಾಡುತ್ತಿರುವ KMF, ದೆಹಲಿಯಲ್ಲಿ ಅಮೂಲ್, ಮದರ್ ಡೈರಿಗೆ ಪೈಪೋಟಿ ಕೊಡಲು ಸಜ್ಜಾಗಿದೆ.
ಇನ್ನು ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸಿಎಂ ಸಿದ್ದು ಚಾಲನೆ ನೀಡಿದರು. ಸಿಎಂಗೆ ಸಚಿವರಾದ ಚೆಲುವರಾಯಸ್ವಾಮಿ, ಬೈರತಿ ಸುರೇಶ್, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, KMF ಅಧ್ಯಕ್ಷ ಭೀಮಾನಾಯ್ಕ್ ಸೇರಿದಂತೆ ಹಲವರು ಸಾಥ್ ನೀಡಿದರು.
ಇದನ್ನೂ ಓದಿ : ಕೊಲೆ ಆರೋಪಿ ದರ್ಶನ್ಗೆ ಮತ್ತಷ್ಟು ಸಂಕಷ್ಟ.. ಮತ್ತೆರಡು ಫೋಟೋ ರಿಟ್ರೀವ್..!