ಪರ್ತ್ : ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2 ಸಾವಿರ ರನ್ ಪೂರೈಸಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದು ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ವರ್ಷಗಳ ಬಳಿಕ ಮೂಡಿಬರುತ್ತಿರುವ ಟೆಸ್ಟ್ ಶತಕ ಎಂಬುದು ವಿಶೇಷ. 2023ರ ಜುಲೈ 21ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ ಮೂರಂಕಿ ಮೊತ್ತ ಕಲೆಹಾಕುವಲ್ಲಿ ಸಫಲರಾಗಿರಲಿಲ್ಲ.
ಇದೀಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಸೀಸ್ ಪಿಚ್ನಲ್ಲೇ ಅಬ್ಬರಿಸುವ ಮೂಲಕ ಮೂರನೇ ಟೆಸ್ಟ್ ಕೆರಿಯರ್ನ 30ನೇ ಶತಕ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮೂವತ್ತು ಸೆಂಚುರಿ ಸಿಡಿಸಿದ ವಿಶ್ವದ 16ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವೆ ಮಹತ್ವದ ಟೆಸ್ಟ್ ಸರಣಿ ಆರಂಭವಾಗಿ ಇಂದಿಗೆ 3 ದಿನ. ಆಸ್ಟ್ರೇಲಿಯಾ ಮತ್ತು ಭಾರತ ಮೊದಲ ಟೆಸ್ಟ್ ಆರಂಭವಾದ ಮೊದಲ ದಿನವೇ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಯಾಕಂದ್ರೆ 150 ರನ್‌ಗೆ ಭಾರತ ತಂಡ ಆಲೌಟ್ ಆಗಿತ್ತು. ಆದರೆ ಭಾರತ ತಂಡ ಮತ್ತೆ ಕಂಬ್ಯಾಕ್ ಮಾಡಿ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು 104 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 487 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆಸೀಸ್‌ಗೆ ಮೊದಲ ಟೆಸ್ಟ್ ಗೆಲ್ಲಲು 534 ರನ್‌ಗಳ ಕಠಿಣ ಗುರಿ ನೀಡಿದೆ.
ಇದನ್ನೂ ಓದಿ : ACP ಮೇಲೆ ಕೇಸ್ ಹಾಕದ BDA ಅಧಿಕಾರಿಗಳಿಗೇ ಶಾಕ್.. ಬಿಡಿಎ ಸ್ವತ್ತು ಸ್ವಾಧೀನಕ್ಕೋದ ಅಧಿಕಾರಿಗಳ ಮೇಲೆ FIR..!