Download Our App

Follow us

Home » ರಾಷ್ಟ್ರೀಯ » ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲದಲ್ಲಿ ತಿರಂಗಾ ಹಾರಾಟ – ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ..!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲದಲ್ಲಿ ತಿರಂಗಾ ಹಾರಾಟ – ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ..!

ದೆಹಲಿ : ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲದಲ್ಲಿ ಭಾರತದ ಪರ ಜೈಕಾರ ಕೇಳಿ ಬಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದ್ದು, ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ದ್ವಜವು ಹಾರಾಡಿದೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ತಿರಂಗಾ ಹಿಡಿದಿರುವ ದೃಶ್ಯ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

ಪಾಕಿಸ್ತಾನದಲ್ಲಿ ಹಣದುಬ್ಬರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಒಂದು ತುತ್ತು ಅನ್ನಕ್ಕೂ ಪರದಾಡ, ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನ, ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ಯಾಸ್​​ ಸಿಲಿಂಡರ್​ ದರ 12,500, 1 ಕೆ.ಜಿ.ಗೋಧಿ ಹಿಟ್ಟಿಗೆ 800 ರೂ ಹಾಗೂ ಲೀಟರ್​ ಹಾಲಿನ ದರ 210 ರೂಪಾಯಿ ಆಗಿದೆ. ಈ ಹಿನ್ನೆಲೆ ಮೀರ್‌ಪುರ್ ಜಿಲ್ಲೆಯ ಸ್ಕಿರ್ಮಿಶ್‌ನಲ್ಲಿ ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಭುಗಿಲೆದ್ದ ಹಿಂಸಾಚಾರಕ್ಕೆ ನೂರಾರು ಮಂದಿ ಗಾಯಗೊಂಂಡಿದ್ದಾರೆ. ಇನ್ನು ಬೀದಿಗಿಳಿದು ಪ್ರಟಿಭಟನೆಯಲ್ಲಿ ತೊಡಗಿರುವ ಜನರು ಭಾರತಕ್ಕೆ ಸೇರ್ಪಡೆ ಮಾಡುವಂತೆ ರಸ್ತೆ ರಸ್ತೆಗಳಲ್ಲಿ ಘೋಟಣೆ ಕೂಗುತ್ತಿದ್ದರು. ಬೀದಿಗಿಳಿದ ಜನರನ್ನು ಹಿಂದಿರುಗಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

ಏನಿದು POK..?

  • 1947ರಲ್ಲಿ ಪಾಕಿಸ್ತಾನ ಆಕ್ರಮಿಸಿದ ಜಮ್ಮು ಕಾಶ್ಮೀರ ಭಾಗವೇ ಪಾಕ್​​​
  • ಪಾಕಿಸ್ತಾನ್​​ ಪಿಒಕೆಯನ್ನು ಆಜಾದ್​ ಕಾಶ್ಮೀರ ಮತ್ತು ಗಿಲ್ಗಿಟ್​​​ ಪಾಕಿಸ್ತಾನ್​
  • ಎರಡು ಭಾಗಗಳನ್ನಾಗಿ ವಿಂಗಡನೆ
  • ಮೀರ್ಪುರ್​​, ಬಿಂಬರ್​​, ಕೋಟ್ಲಿ, ಮಜುಫರಾಬಾದ್​​,ಬಾಗ್​, ನೀಲಂ,
  • ರಾವಲಕೋಟ್​​, ಸುಧಾನೋತಿ ಆಜಾದ್​​ ಕಾಶ್ಮೀರದ ಜಿಲ್ಲೆಗಳು

ಈಗ POK ಹೇಗಿದೆ..?

  • POK ಅಭಿವೃದ್ಧಿಯಲ್ಲಿ ಹಿಂದುಳಿದಿದೆ
  • ಪಾಕ್​ ಸರ್ಕಾರದಿಂದ ನಿರ್ಲಕ್ಷ್ಯಕ್ಕೀಡಾಗಿದೆ
  • POK ಜಿಲ್ಲೆಗಳಲ್ಲಿ ಮೂಲಸೌಕರ್ಯ ಇಲ್ಲ
  • ಕುಡಿಯುವ ನೀರು, ರಸ್ತೆ ಸೌಲಭ್ಯ ಇಲ್ಲ
  • ಬಡತನದಿಂದ ಜನರು ಬೇಸತ್ತಿದ್ದಾರೆ
  • ಇತ್ತೀಚೆಗೆ ಹಣದುಬ್ಬರ ಹೆಚ್ಚಾಗುತ್ತಿದೆ
  • ಒಂದು ಹೊತ್ತಿನ ಊಟಕ್ಕೂ ಕಷ್ಟ
  • ಭಾರತದ ಅಭಿವೃದ್ಧಿಯತ್ತ ನೋಟ

ನಮ್ಮ ಕಾಶ್ಮೀರ ಹೇಗಿದೆ..?

  • ಆರ್ಟಿಕಲ್​​​​​​​​​​​​​ 370 ರದ್ಧತಿ ಬಳಿಕ ಶಾಂತ
  • ಭಯೋತ್ಪಾದನೆ ಕೃತ್ಯ ಇಳಿಮುಖವಾಗಿದೆ
  • ಗನ್​, ಕಲ್ಲು ಹಿಡಿವ ಕೈಗಳಿಗೆ ಉದ್ಯೋಗ
  • ಶಾಲಾ, ಕಾಲೇಜುಗಳು ತುಂಬಿ ತುಳುಕುತ್ತಿವೆ
  • ಅಭಿವೃದ್ಧಿ ತಿರಂಗಾ ಹಾರುತ್ತಿದೆ
  • ಆರ್ಥಿಕತೆಯಲ್ಲೂ ಮುನ್ನಡೆ ಸಾಧಿಸುತ್ತಿದೆ
  • ಮೂಲಸೌಕರ್ಯ, ಪ್ರವಾಸೋದ್ಯಮ ಪ್ರಗತಿ
  • ಜನರ ಜೀವನಮಟ್ಟ ಸುಧಾರಣೆ

ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆ : 5 ಕ್ಷೇತ್ರಗಳಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here