ಕನ್ನಡದ ಜನಪ್ರಿಯ ಶೋ ‘ಬಿಗ್‌ಬಾಸ್ ಸೀಸನ್ 11’ 95 ದಿನಗಳನ್ನು ದಾಟಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿಯಿವೆ. ಹಾಗಾಗಿ ದೊಡ್ಮನೆ ಆಟ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಈ ವಾರ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿತ್ತು. 14ನೇ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ತಾಯಿ ಮೊದಲು ಬಿಗ್‌ಬಾಸ್ ಮನೆಗೆ ಆಗಮಿಸಿದ್ದರು. ಈ ಸಂದರ್ಭ ಬಿಗ್‌ಬಾಸ್ ಮನೆಗೆ ಬಂದ ಭವ್ಯಾ ಸಹೋದರಿ ದಿವ್ಯಾ ಗೌಡ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಇವರೇ ಕರ್ನಾಟಕದ ನಯಾ ಕ್ರಶ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಭವ್ಯಾ ಗೌಡ ಸಹೋದರಿ ದಿವ್ಯಾ ಏನ್ಮಾಡ್ತಿದ್ದಾರೆ? ಅವರ ವಯಸ್ಸೆಷ್ಟು ಎಂಬ ಮಾಹಿತಿ ಇಲ್ಲಿದೆ.
ಭವ್ಯಾ ಸಹೋದರಿ ದಿವ್ಯಾ ವಯಸ್ಸೆಷ್ಟು ಗೊತ್ತಾ? ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಅವರ ಅಕ್ಕನ ಹೆಸರು ದಿವ್ಯಾ ಗೌಡ. ವೃತ್ತಿಯಲ್ಲಿ ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಆಗಿರುವ ದಿವ್ಯಾ ಅವರಿಗೀಗ 28 ವರ್ಷ ವಯಸ್ಸು. ಪ್ರತ್ಯೇಕ ಕೋರ್ಸ್ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ.
ಜೊತೆಗೆ ಬ್ರೈಡಲ್ ಮೇಕಪ್‌ನಲ್ಲಿ ಪರಿಣತಿ ಹೊಂದಿದ್ದಾರೆ. ದಿವ್ಯಾ ಅವರು ಹಲವು ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ, ಗೋಲ್ಡನ್ ಕ್ವೀನ್ ಅಮೂಲ್ಯ, ನಟಿ ಕಾವ್ಯ ಶೆಟ್ಟಿ, ನಟಿ ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವು ತಾರೆಯರಿಗೆ ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ : ಸರ್ಜರಿ ಬಳಿಕ ಆಸ್ಪತ್ರೆಯಿಂದ ಶಿವಣ್ಣ ಡಿಸ್ಚಾರ್ಜ್.. ಫ್ಯಾಮಿಲಿ ಜೊತೆ ರಿಲ್ಯಾಕ್ಸ್..!
Post Views: 687