Download Our App

Follow us

Home » ರಾಜ್ಯ » ನಾಡಿನೆಲ್ಲೆಡೆ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ.. ಕುಂದಾನಗರಿಯಲ್ಲಿ ಮಧ್ಯರಾತ್ರಿ ಅದ್ದೂರಿ ಕನ್ನಡದ ಉತ್ಸವ..!

ನಾಡಿನೆಲ್ಲೆಡೆ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ.. ಕುಂದಾನಗರಿಯಲ್ಲಿ ಮಧ್ಯರಾತ್ರಿ ಅದ್ದೂರಿ ಕನ್ನಡದ ಉತ್ಸವ..!

ಬೆಂಗಳೂರು : ನವೆಂಬರ್ 1.. ಅಂದರೆ ಇಂದು ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಸಡಗರದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ. ಇದೇ ಕಾರಣದಿಂದ ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ರಾಜ್ಯಾದ್ಯಂತ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮ ಮನೆ ಮಾಡಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯ್ತು. ರಾಣಿ ಚೆನ್ನಮ್ಮ ‌ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರ ಜಮಾಯಿಸಿ ಕೇಕ್ ಕತ್ತರಿಸಿ, ಕನ್ನಡದ ದೀಪ ಹಚ್ಚಿ ಪಟಾಕಿ ಸಿಡಿಸಿ ವೈಭವದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.

ಕೆಂಪು-ಹಳದಿ ಬಣ್ಣದ ಬಲೂನ್‌‌ಗಳ ಗುಚ್ಚ ಆಕಾಶಕ್ಕೆ ತೇಲಿ ಬಿಟ್ಟು ಸಂಭ್ರಮಿಸಿದ್ದಾರೆ. ಇದೇ ವೇಳೆ ನಾಡಧ್ವಜ, ಪುನೀತ್​ ರಾಜಕುಮಾರ್ ಫೋಟೋಗಳನ್ನು ಹಿಡಿದು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯುವ ಜನತೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಪ್ರಮುಖ ರಸ್ತೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಹಾಕಿ ಗೌರವಿಸಲಾಗಿದೆ.

ಇನ್ನು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಐತಿಹಾಸಿ ಕಟ್ಟಡಗಳಿಗೆ ಕೆಂಪು ಹಳದಿ ದೀಪಲಂಕಾರ ಮಾಡಲಾಗಿದ್ದು, ವಿಧಾನಸೌಧ ಕಟ್ಟಡ ಕೆಂಪು ಹಾಗೂ ಹಳದಿ ಬಣ್ಣದಲ್ಲಿ ವಿದ್ಯುತ್​ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ. ಕಟ್ಟಡದ ಸುತ್ತಲೂ ಕನ್ನಡದ ಬಾವುಟಗಳು ರಾರಾಜಿಸುತ್ತಿದೆ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿ ಕಚೇರಿ ಸಹ ಕೆಂಪು ಹಾಗೂ ಹಳದಿ ಬಣ್ಣ ಬೆಳಕಿನಲ್ಲಿ ಜಗಮಗಿಸ್ತಿದೆ.

ಈ ಬಾರಿ ಮನೆ-ಮನೆಯಲ್ಲೂ ಕನ್ನಡ ಉತ್ಸವಕ್ಕೆ ಕರೆ ನೀಡಲಾಗಿದ್ದು, ಖುದ್ದು ಸರ್ಕಾರದಿಂದಲೇ ಕನ್ನಡ ಮೆರವಣಿಗೆಯ ಸಂಕಲ್ಪ ಮಾಡಿಕೊಂಡಿದೆ. ಖಾಸಗಿ ಕಂಪನಿಗಳಲ್ಲೂ ಕನ್ನಡ ಧ್ವಜ ಹಾರಿಸಲು ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಒಟ್ಟಾರೆ ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಇಡೀ ತಿಂಗಳು ಕನ್ನಡದ ಕಂಪು ಎಲ್ಲೆಡೆ ಪಸರಿಸಲಿದೆ.

ಇದನ್ನೂ ಓದಿ : ದಾವಣಗೆರೆ : ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here