Download Our App

Follow us

Home » ಸಿನಿಮಾ » ಮನೆಯವ್ರ ಜೊತೆ ಕುಳಿತು ನೋಡಲು ಅಸಾಧ್ಯವಾದ ಕನ್ನಡ ಸಿನಿಮಾ ಯಾವುದು? ಇದಕ್ಕೆ ಬಂದ ಉತ್ತರ ನೋಡಿ..!

ಮನೆಯವ್ರ ಜೊತೆ ಕುಳಿತು ನೋಡಲು ಅಸಾಧ್ಯವಾದ ಕನ್ನಡ ಸಿನಿಮಾ ಯಾವುದು? ಇದಕ್ಕೆ ಬಂದ ಉತ್ತರ ನೋಡಿ..!

ಟ್ರೋಲ್‌ ಪೇಜ್​ಗಳಲ್ಲಿ ಒಮ್ಮೊಮ್ಮೆ ತೀರಾ ಗಂಭೀರವಾದ ವಿಚಾರದ ಬಗ್ಗೆ ಚರ್ಚೆ ಆಗುತ್ತಿದ್ದರೆ, ಇನ್ನೂ ಕೆಲವೊಮ್ಮೆ ಕೆಲಸಕ್ಕೆ ಬಾರದ ಯಾವುದೋ ವಿಚಾರಗಳು ಚರ್ಚೆಯಾಗುತ್ತಿರುತ್ತವೆ. ಅದಕ್ಕೆ ಸಾಕಷ್ಟು ಮಂದಿ ಕಾಮೆಂಟ್‌ ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ.

ಇತ್ತೀಚೆಗೆ ಅಂಥದ್ದೇ ಒಂದು ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮನೆಯವರ ಜೊತೆ ಕುಳಿತು ನೋಡಲು ಅಸಾಧ್ಯವಾದ ಒಂದು ಕನ್ನಡ ಸಿನಿಮಾ ಯಾವುದು ಅನ್ನೋದರ ಬಗ್ಗೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.  ಈ ಬಗ್ಗೆ ಒಂದು ಟ್ರೋಲ್‌ ಪೇಜ್‌ ಹಾಕಿದ ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮೆಂಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಇಲ್ಲಿಯವರೆಗೂ 35 ಸಾವಿರಕ್ಕೂ ಅಧಿಕ ವೀವ್ಸ್‌ಗಳು ಬಂದಿದ್ದರೆ, 2 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಹಲವು ಮಂದಿ ಹಲವು ಕನ್ನಡ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ಈ ಸಿನಿಮಾಗಳನ್ನು ಮನೆಯವರು ಅಂದೆ ತಮ್ಮ ತಂದೆ-ತಾಯಿಯ ಜೊತೆ ನೋಡಲು ಆಗೋದಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ಉಪೇಂದ್ರ ಅಭಿನಯದ ಐ ವಲ್‌ ಯೂ ಸಿನಿಮಾ ಹಾಗೂ ಜಗ್ಗೇಶ್‌ ಅವರ ತೋತಾಪುರಿ ಸಿನಿಮಾವನ್ನು ಹೆಚ್ಚಿನವರು ಹೇಳಿದ್ದಾರೆ. ಅದರೊಂದಿಗೆ ಉಪೇಂದ್ರ ಅವರ ಕೆಲ ಸಿನಿಮಾಗಳನ್ನು ಮನೆಯವರ ಜೊತೆ ಕುಳಿತು ನೋಡಲು ಮುಜುಗರವಾಗುತ್ತದೆ ಎಂದಿದ್ದಾರೆ. ಅದರೊಂದಿಗೆ ಐಶಾನಿ ಶೆಟ್ಟಿ ಅಭಿನಯದ ನಡುವೆ ಅಂತರವಿರಲಿ ಸಿನಿಮಾವನ್ನೂ ಕೂಡ ಹೆಸರಿಸಿದ್ದಾರೆ.

ಕ್ಲಾಟ್ಲೆ ಸತೀಶ್‌ ಹಾಗೂ ಹರಿಪ್ರಿಯಾ ಅಭಿನಯದ ಪೆಟ್ರೋಮ್ಯಾಕ್ಸ್‌, ಜಗ್ಗೇಶ್‌ ಅವರ ನೀರ್‌ದೋಸೆ ಸಿನಿಮಾವನ್ನೂ ಕೆಲವರು ಹೆಸರಿಸಿದ್ದಾರೆ. ರವಿಚಂದ್ರನ್‌ ಅವರ ಸಿನಿಮಾಗಳು, ಕಾಶಿನಾಥ್‌ ಅವರ ಅನುಭವ ಸಿನಿಮಾ, ಗಂಡ ಹೆಂಡತಿ, ಎ, ದಂಡುಪಾಳ್ಯ, ರವಿಚಂದ್ರನ್‌ ಅವರ ಮಲ್ಲ ಸಿನಿಮಾ, ಕಾಶಿನಾಥ್‌ ಅವರ ಅಜಗಜಾಂತರ ಹೀಗೆ ಹಲವಾರು ಸಿನಿಮಾಗಳನ್ನು ಹೆಸರಿಸಿದ್ದಾರೆ.

ಇನ್ನು ಇತ್ತೀಚೆಗೆ ಬಿಡುಗಡೆಯಾದ ಮಂಜುಮಲ್‌ ಬಾಯ್ಸ್ ಸಿನಿಮಾವನ್ನೂ ಕೂಡ ಹೆಸರಿಸಲಾಗಿದೆ. ಮಲಯಾಳಂ ಭಾಷೆಯ ಥ್ರಿಲ್ಲರ್‌ ಸಿನಿಮಾವನ್ನು ಇಲ್ಲಿ ಹೇಳೋದಕ್ಕೂ ಕಾರಣವಿದೆ. ಹಾಗೇನಾದರೂ ಈ ಸಿನಿಮಾವನ್ನು ಮನೆಯವರ ಜೊತೆ ನೋಡಿದ್ರೆ ಅವರು ನನ್ನನ್ನೂ ಎಲ್ಲೂ ಟ್ರಿಪ್‌ಗೆ ಕಳಿಸೋದಿಲ್ಲ ಎಂದು ಬರೆದುಕೊಂಡಿದ್ದಾರೆ. ಇಡೀ ಮನೆಯವರು ಕುಳಿತು ನೋಡುವಂಥ ಸಿನಿಮಾ ಏನಾದರೂ ಇದ್ದರೆ, ಅದು ಅಪ್ಪು ಹಾಗೂ ಅಣ್ಣಾವ್ರು ಅವರ ಸಿನಿಮಾ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ : ಉತ್ತರಾಖಂಡ್​ ಚಾರಣ ದುರಂತ – ರಾಜ್ಯಕ್ಕೆ ಸುರಕ್ಷಿತವಾಗಿ ಮರಳಿದ 13 ಮಂದಿ ಚಾರಣಿಗರು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here