Download Our App

Follow us

Home » ಜಿಲ್ಲೆ » ಕಲ್ಕಿ 2898 AD ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಫಸ್ಟ್‌ ಲುಕ್‌ ಗ್ಲಿಂಪ್ಸ್‌ ರಿಲೀಸ್..!

ಕಲ್ಕಿ 2898 AD ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಫಸ್ಟ್‌ ಲುಕ್‌ ಗ್ಲಿಂಪ್ಸ್‌ ರಿಲೀಸ್..!

ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌.

ಹೌದು, ಕಳೆದ ವರ್ಷ ಅಮಿತಾಬ್‌ ಅವರ ಬರ್ತ್‌ಡೇ ದಿನದಂದು ಕಲ್ಕಿ ಚಿತ್ರದಲ್ಲಿನ ಅವರ ಲುಕ್‌ ಹೇಗಿರಲಿದೆ ಎಂಬ ಸಣ್ಣ ಝಲಕ್‌ ರಿಲೀಸ್‌ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಬ್‌ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕವನ್ನು ತಣಿದಿದೆ. ಅಂದರೆ, ಕಲ್ಕಿ ಚಿತ್ರದಲ್ಲಿನ ಅಮಿತಾಬ್‌ ಬಚ್ಚನ್‌ ಪಾತ್ರದ ಖಲಕ್‌ ಹೊರಬಿದ್ದಿದೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಲ್ಕಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅಶ್ವತ್ಥಾಮನಾಗಿ ಅಮಿತಾಬ್‌ ಬಚ್ಚನ್‌ ಕಾಣಿಸಿಕೊಳ್ಳಲಿದ್ದಾರೆ. ಒಂದು ನಿಮಿಷದ ಝಲಕ್‌ನಲ್ಲಿ ಎಲ್ಲ ಭಾಷೆಯನ್ನೂ ಬೆರೆಸಿ ಟೀಸರ್‌ ಬಿಡುಗಡೆ ಮಾಡಲಾಗಿದೆ.

ಪುಟಾಣಿಯೊಬ್ಬ ನೀವ್ಯಾರು, ನಿಮ್ಮ ಜತೆ ನಾನು ಯಾವ ಭಾಷೆಯಲ್ಲಿ ಮಾತನಾಡಲಿ? ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ಆಗ, ಈಗ ನನ್ನ ಸಮಯ ಬಂದಿದೆ. ನನ್ನ ಕೊನೆಯ ಯುದ್ಧಕ್ಕೆ ಸಮಯ ಬಂದಿದೆ. ನಾನು ದ್ರೋಣಾಚಾರ್ಯರ ಮಗ ಅಶ್ವತ್ಥಾಮ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ ಅಮಿತಾಬ್‌ ಬಚ್ಚನ್.‌

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್.‌ ಪ್ರಬಾಸ್‌ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ : ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here