ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಯುವಕನ ಮೇಲೆ ಗುಂಡಿನ ದಾಳಿ ನಡೆದಿದೆ. 28 ವರ್ಷದ ಶ್ರೀಕಾಂತ್ ಪೂಜಾರಿ ಎಡಗೈಗೆ ಗುಂಡು ತಾಗಿದೆ. ಕಳೆದ ರಾತ್ರಿ ಕಡಗಂಚಿ ಗ್ರಾಮದ ಮನೆಯಲ್ಲಿ ಎಣ್ಣೆ ಪಾರ್ಟಿ ಮಾಡ್ತಿದ್ದ ವೇಳೆ ಘಟನೆ ನಡೆದಿದೆ.
ಶ್ರೀಕಾಂತ್, ಮಾಳಪ್ಪ, ಕಾಂತಪ್ಪ ಸೇರಿದಂತೆ ಆರೇಳು ಜನ ಸೇರಿ ಪಾರ್ಟಿ ಮಾಡ್ತಿದ್ದರು. ಪಾರ್ಟಿ ವೇಳೆ ಜಗಳ ಉಂಟಾಗಿ ಶ್ರೀಕಾಂತ್ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ಮಾಡಿದ ಗನ್ ಸಹಿತ ಆರೋಪಿಗಳಾದ ಕಾಂತಪ್ಪ ಮತ್ತು ಮಾಳಪ್ಪರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಹಾ ಮಳೆಗೆ ಮುಂಬೈ ತತ್ತರ.. ಜನಜೀವನ ಅಸ್ತವ್ಯಸ್ತ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!
Post Views: 49