ಕಲಬುರಗಿ : ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ನಡೆದಿದೆ. ಗುರೂಜಿ ತಾಂಡಾ ನಿವಾಸಿ 22 ವರ್ಷದ ಅರ್ಜುನ್ ರಾಠೋಡ್ ಮೃತ ದುದೈವಿ.
ಲಾಡ್ಲಾಪುರ ಗ್ರಾಮದಿಂದ ಮೂವರು ಬೈಕ್ ಮೇಲೆ ತಾಂಡಕ್ಕೆ ತೆರಳಿದ್ದರು. ಈ ವೇಳೆ ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಾಘತದಲ್ಲಿ ಅರ್ಜುನ್ ರಾಠೋಡ್ ಸಾವನ್ನಪ್ಪಿದ್ರೆ, ರೋಹಿತ್ ಚೌವ್ಹಾಣ್, ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ ‘ಸುವರ್ಣ ದಸರಾ ದರ್ಬಾರ್’..!
Post Views: 78