ಬೆಂಗಳೂರು : ಬೆಂಗಳೂರಿನ ಪಿಜಿಯ 5ನೇ ಮಹಡಿಯಿಂದ ಹಾರಿ ಯುವತಿ ಸಾವನ್ನಪ್ಪಿದ್ದಾಳೆ. ಆಂಧ್ರ ಮೂಲದ 24 ವರ್ಷದ ಯುವತಿ ಗೌತಮಿ ಮೃತ ದುರ್ದೈವಿ. ಈ ಘಟನೆ ನಿನ್ನೆ ಸಂಜೆ 7 ಗಂಟೆಗೆ ವೈಟ್ಫೀಲ್ಢ್ನ ಪ್ರಶಾಂತ್ ಲೇಔಟ್ನಲ್ಲಿ ನಡೆದಿದೆ.
ವಿದ್ಯಾಭ್ಯಾಸದ ಜೊತೆಗೆ ಪಾರ್ಟ್ಟೈಮ್ ಕೆಲಸ ಮಾಡ್ತಿದ್ದ ಯುವತಿ ಸಾವಿಗು ಮುನ್ನ Sorry ಅಂತಾ ಪತ್ರ ಬರೆದಿಟ್ಟಿದ್ದಾಳೆ. ಡೆತ್ನೋಟ್ ಬರೆದಿಟ್ಟು ಬಳಿಕ ಗೌತಮಿ ಕಟ್ಟಡದಿಂದ ಹಾರಿದ್ದಾಳೆ. ಪೊಲೀಸರು ಯುವತಿಯ ಸಾವಿನ ಬಗ್ಗೆ ಪೋಷಕರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದು, ವೈಟ್ಫೀಲ್ಡ್ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಡೆತ್ನೋಟ್ನಲ್ಲಿ ನನ್ನ ಮೃತ ದೇಹವನ್ನು ಪೋಸ್ಟ್ಮಾರ್ಟಂ ಮಾಡಬೇಡಿ, ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ Sorry, ನನ್ನ ಪೋಷಕರಿಗೆ ನನ್ನ ಮೃತ ದೇಹ ನೀಡಿ ಎಂದು ಉಲ್ಲೇಖ ಮಾಡಿದ್ದಾರೆ. ಫೋಸ್ಟ್ ಮಾರ್ಟಂ ಮಾಡಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ – ಮದುವೆ ಯಾವಾಗ?
Post Views: 306