ಟಾಲಿವುಡ್ ನಟ ಜೂ.NTR ಈಗ ಪ್ಯಾನ್ ಇಂಡಿಯಾ ಸ್ಟಾರ್. ಟ್ರಿಪಲ್ ಆರ್ ಸಿನಿಮಾದಿಂದ ತಾರಕ್ ವರ್ಲ್ಡ್ ವೈಡ್ ಫೇಮಸ್ ಆಗಿದ್ದಾರೆ. ಸದ್ಯ ಆರ್.ಆರ್.ಆರ್. ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಆಗ್ತಿದೆ. ಇದೀಗ ಮತ್ತೆ ದೇವರ ಸಿನಿಮಾದಿಂದ ಜೂ.NTR ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಜೂ.ಎನ್ಟಿಆರ್ ಸಿನಿಮಾಗಳಲ್ಲಿ ವಿಶೇಷ ಅಂದ್ರೆ ಒಂದಿಷ್ಟು ವಿಚಿತ್ರ ಘಟನೆಗಳಿವೆ. ಅವುಗಳಲ್ಲಿ ಒಂದು ಈಗ ವೈರಲ್ ಆಗ್ತಿದೆ. ಹೌದು.. ಸಿನಿಮಾ ಸೆಟ್ನಲ್ಲಿ ನಿರ್ದೇಶಕರ ಜೊತೆ ಜಗಳ ಮಾಡಿಕೊಂಡು, ಈ ಸಿನಿಮಾ ಮಾಡಲ್ಲ ಅಂತ ಜೂ.ಎನ್ಟಿಆರ್ ಹೊರಟು ಹೋಗಿದ್ರಂತೆ.
ಚಿಕ್ಕವರಿದ್ದಾಗ ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾರಂಗಕ್ಕೆ ಬಂದ ಜೂ.NTR, ಗುಣಶೇಖರ್ ನಿರ್ದೇಶಿಸಿದ ಬಾಲರಾಮಾಯಣಂ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದರು. ಇನ್ನು ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಎಲ್ಲರೂ ಚಿಕ್ಕ ಮಕ್ಕಳೇ ಆಗಿದ್ದರಿಂದ ಯಾರೂ ಸುಮ್ಮನೆ ಕೂರುತ್ತಿರಲಿಲ್ಲವಂತೆ. ರಾಮನ ಪಾತ್ರದಲ್ಲಿ ನಟಿಸಿದ ಜೂನಿಯರ್ ಎನ್.ಟಿ.ಆರ್ ಸೆಟ್ನಲ್ಲಿ ಬೇರೆಯವರಿಗಿಂತ ಹೆಚ್ಚು ತುಂಟಾಟ ಮಾಡ್ತಿದ್ರಂತೆ.
ನಿರ್ದೇಶಕ ಗುಣಶೇಖರ್ ಶಿವ ಧನುರ್ಭಂಗ ದೃಶ್ಯಕ್ಕೆ ತೇಗಿನ ಮರದಿಂದ ಯುದ್ಧ ದೃಶ್ಯಗಳಿಗೆ ವಿಶೇಷ ಬಿಲ್ಲು ಬಾಣ ಮಾಡಿಸಿದ್ರಂತೆ, ಇನ್ನೊಂದು ಡೂಪ್ಲಿಕೇಟ್ ಬಿಲ್ಲನ್ನೂ ಮಾಡಿಸಿಟ್ಟಿದ್ರಂತೆ. ಚಿತ್ರೀಕರಣ ನಡೆಯುತ್ತಿರುವಾಗ ಜೂ.ಎನ್ಟಿಆರ್ ಮಕ್ಕಳ ಜೊತೆ ಸೇರಿ ಡೂಪ್ಲಿಕೇಟ್ ಬಿಲ್ಲನ್ನು ಎತ್ತಿದ್ರಂತೆ. ನಂತರ ತೇಗಿನ ಬಿಲ್ಲನ್ನೂ ಎತ್ತಿ ಜೂ.NTR ಮುರಿದಿದ್ದರಂತೆ. ಈ ವೇಳೆ ನಿರ್ದೇಶಕ ಗುಣಶೇಖರ್ ಸಿಟ್ಟಾಗಿ ಜೂ.NTRಗೆ ಬೈದಿದ್ದರು. ಆಗ ಮುನಿಸಿಕೊಂಡು, ಈ ಸಿನಿಮಾ ಮಾಡಲ್ಲ, ಮನೆಗೆ ಹೋಗ್ತೀನಿ ಎಂದು ಜೂ.NTRಗೆ ಹೇಳಿದ್ರಂತೆ.
ಗುಣಶೇಖರ್ ನಿರ್ದೇಶನದಲ್ಲಿ ತಾರಕ್ ರಾಮನಾಗಿ ನಟಿಸಿದ ಮೊದಲ ಸಿನಿಮಾ ರಾಮಾಯಣಂ. ಎಂ.ಎಸ್.ರೆಡ್ಡಿ ನಿರ್ಮಿಸಿದ ಈ ಚಿತ್ರಕ್ಕೆ ಉತ್ತಮ ಬಾల ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ರಾಮಾಯಣಂ ಸಿನಿಮಾದಲ್ಲಿ ರಾಮನಾಗಿ ಅದ್ಭುತವಾಗಿ ನಟಿಸಿ ಜೂ.NTR ಪ್ರೇಕ್ಷಕರ ಮನಗೆದಿದ್ದರು.
ಇದನ್ನೂ ಓದಿ : ಮೊಮ್ಮಗ ನಿಖಿಲ್ ಪರ ಇಂದು ಕೂಡ ಅಖಾಡಕ್ಕಿಳಿಯಲಿರೋ ಮಾಜಿ ಪ್ರಧಾನಿ ದೇವೇಗೌಡರು..!