ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಜೊತೆಗಿನ ಫೋಟೋಸ್ ಹಾಗೂ ಸಂಬಂಧದ ನೆಪ ಹೇಳಿ ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿದ್ದ ಕೇಸಲ್ಲಿ ಐಶ್ವರ್ಯ ಗೌಡ ದಂಪತಿ ಕೊನೆಗೂ ಅರೆಸ್ಟ್ ಆಗಿದ್ದಾರೆ. ಐಶ್ವರ್ಯ ಗೌಡ ಅವರು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರು ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಐಶ್ವರ್ಯ ಗೌಡ ಮತ್ತು ಪತಿ ಹರೀಶ್ ಅವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಐಶ್ವರ್ಯ ಗೌಡ ಅವರನ್ನು ಇನ್ನೂ ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಬಿಟಿವಿ ಸುದ್ದಿ ಪ್ರಸಾರದ ಮೂಲಕ ಪೊಲೀಸರಿಗೆ ಪ್ರಶ್ನೆ ಮಾಡಿತ್ತು. 14 ಕೆಜಿ ಚಿನ್ನ ಕದ್ದ ಕೇಸಲ್ಲಿ ಐಶ್ವರ್ಯ ಗೌಡ ದಂಪತಿಯನ್ನು ವಿಚಾರಣೆಗೆ ಕರೆದು ಅರೆಸ್ಟ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆ ಹಾಗೂ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಐತಾಳ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಶ್ವರ್ಯಗೌಡ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕರೆದಿದ್ರು, ನಾನು ಐಶ್ವರ್ಯಗೌಡ ವಿರುದ್ಧ 8.41 ಕೋಟಿ ಮೌಲ್ಯದ 14 ಕೆಜಿ ಚಿನ್ನ ವಂಚನೆ ಕೇಸ್ ದಾಖಲು ಮಾಡಿದ್ದೀನಿ. ಸೂಕ್ತ ದಾಖಲೆಗಳನ್ನು, ವಾಯ್ಸ್ ರೆಕಾರ್ಡ್‌ಗಳನ್ನು ಪೊಲೀಸರಿಗೆ ಕೊಟ್ಟಿದೇನೆ ಎಂದರು.
ಇನ್ನು ಕೋಟಿ ಕೋಟಿ ಬೆಲೆಯ ಚಿನ್ನದ ಕೇಸ್ ಹಿಂದೆ ದೊಡ್ಡವರಿದ್ದಾರೆ ಎಂದು ಐಶ್ವರ್ಯಾ ಗೌಡ ಬಿಗ್ ಬಾಂಬ್ ಸಿಡಿಸಿದ್ದಾರೆ. ಬೆಳಗ್ಗೆ ವಿಡಿಯೋ ಮಾಡಿ ಎಲ್ಲರ ಜಾತಕ ತೆಗೀತೀನಿ ಎಂದಿದ್ದರು. ನನ್ನ ಹಾಗೂ ವನಿತಾ ಸಂಬಂಧ ಚಿನ್ನ, ಹಣಕ್ಕಷ್ಟೇ ಸೀಮಿತವಾಗಿಲ್ಲ. ವನಿತಾ ಬ್ಲ್ಯಾಕ್ ಮನಿ ವೈಟ್ ಮಾಡ್ತಾಳೆ ಎಂದು ಐಶ್ವರ್ಯಾ ಆರೋಪಿಸಿದ್ದರು. ಇದೀಗ ಪೊಲೀಸರು ಐಶ್ವರ್ಯಗೌಡ ದಂಪತಿಯನ್ನು ಬಂಧಿಸಿ ಮೆಡಿಕಲ್ ಟೆಸ್ಟ್ ಮಾಡಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇನ್ನು ಐಶ್ವರ್ಯಾ ಗೌಡ ಅವರು ಮಾಜಿ ಸಂಸದ ಡಿಕೆ ಸುರೇಶ್ ಹೆಸರೇಳಿಕೊಂಡು ಎಲ್ಲರಿಗೂ ವಂಚಿಸ್ತಿದ್ದಳು. ಒಂದೇ ಒಂದು ಫೋಟೋ ಇಟ್ಕೊಂಡು ಕೋಟಿ ಕೋಟಿ ಲೂಟಿ ಮಾಡಿರುವ ಆರೋಪ ಇದೆ. ಆ ಫೋಟೋ ಬಿಟಿವಿಗೆ ಲಭ್ಯವಾಗಿದ್ದು ಐಶ್ವರ್ಯಾ ಅವರು ಡಿಕೆ ಸುರೇಶ್ & ಕುಸುಮಾ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆ ಹಳೇ ಫೋಟೋ ತೋರಿಸಿಕೊಂಡೇ ಕೋಟಿ ಕೋಟಿ ಬ್ಯುಸಿನೆಸ್ ಮಾಡಿರುವ ಆರೋಪ ಇದೆ. ಪೊಲೀಸರ ತನಿಖೆಯಲ್ಲಿ ಐಶ್ವರ್ಯ ಐನಾತಿ ಸ್ಟೋರಿ ಬಯಲಾಗ್ತಿದೆ.
ಇದನ್ನೂ ಓದಿ : 9 ಕೋಟಿ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್.. ಅಜ್ಞಾತ ಸ್ಥಳದಿಂದ ಐಶ್ವರ್ಯಾ ವಿಡಿಯೋ ರಿಲೀಸ್..!