Download Our App

Follow us

Home » ರಾಜಕೀಯ » JDS ಸೇರಿದ ನಂತರ ಬಿಜೆಪಿ ವಾತಾವರಣ ಕೆಟ್ಟಿದೆ – ಕಾಂಗ್ರೆಸ್ ಸೇರ್ಪಡೆ ಬಳಿಕ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ..!

JDS ಸೇರಿದ ನಂತರ ಬಿಜೆಪಿ ವಾತಾವರಣ ಕೆಟ್ಟಿದೆ – ಕಾಂಗ್ರೆಸ್ ಸೇರ್ಪಡೆ ಬಳಿಕ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ..!

ಬೆಂಗಳೂರು : ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರುತ್ತಿದ್ದು, ಎನ್‌ಡಿಎ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳಿಗೆ ಸಡ್ಡು ಹೊಡೆದಿದ್ದಾರೆ. ಇಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಿ.ಪಿ.ಯೋಗೇಶ್ವರ್‌ ಅವರು ರಾಜೀನಾಮೆ ನೀಡಿದ್ದು, ಈ ಬೆನ್ನಲ್ಲೇ ಅವರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಬಳಿಕ ಸಿ.ಪಿ.ಯೋಗೇಶ್ವರ್ ಮಾತನಾಡಿ, JDS ಸೇರಿದ ನಂತರ ಬಿಜೆಪಿ ವಾತಾವರಣ ಕೆಟ್ಟಿದೆ. ಯಾವುದೇ ಷರತ್ತು ಹಾಕದೇ ನಾನು ಕಾಂಗ್ರೆಸ್​​ ಸೇರಿದ್ದೇನೆ. ಎಲ್ಲರ ಜೊತೆ ಸೇರಿ ಕಾಂಗ್ರೆಸ್​​ ಪಕ್ಷ ಕಟ್ಟುತ್ತೇವೆ ಎಂದಿದ್ದಾರೆ.

ಇನ್ನು ಡಿಕೆಶಿ ನೇತೃತ್ವದಲ್ಲಿ ರಾಮನಗರ ಅಭಿವೃದ್ಧಿಯಾಗ್ತಿದೆ. ಜಿಲ್ಲೆಯ ಒಳಿತಿಗಾಗಿ ನಾನು ಕಾಂಗ್ರೆಸ್​​ ಬಂದಿರುವೆ. ಎಲ್ಲರ ಜೊತೆ ಒಟ್ಟಾಗಿ ಕೆಲಸ ಮಾಡೋಣ. ಕಾಂಗ್ರೆಸ್​​ ಕಾರ್ಯಕರ್ತನಾಗಿ ದುಡಿಯುವೆ ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಬಿಗ್​ಬಾಸ್ ಮನೆಗೆ​ ವೈಲ್ಡ್​ಕಾರ್ಡ್ ಎಂಟ್ರಿ ಕೊಡ್ತಾರಾ ರಂಜಿತ್​.. ಈ ಬಗ್ಗೆ ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್​ ಸೇರಿದ ಯೋಗೇಶ್ವರ್​​ ಅಭ್ಯರ್ಥಿ ಆಗೋದು ಫಿಕ್ಸ್​.. ಡಿಕೆಶಿ ಚೆಕ್​ಮೇಟ್​ಗೆ ಹೆಚ್​ಡಿಕೆ ರಣತಂತ್ರ ಏನು..?

ಬೆಂಗಳೂರು : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಸಿ.ಪಿ.ಯೋಗೇಶ್ವರ್​ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ

Live Cricket

Add Your Heading Text Here